ಉ.ಕ ಸುದ್ದಿಜಾಲ ಅಥಣಿ :
ಆಧುನಿಕ ಕರ್ಣನಿಂದ ಬಡವರಿಗೆ ಬಂಗಾರ, ಬೆಳ್ಳಿ, ಹಣ, ಬಟ್ಟೆ ದಾನ ಪ್ರತಿ ವರ್ಷ ಕೃಷಿಯಲ್ಲಿ ಬೆಳೆದ ಒಂದು ಭಾಗವನ್ನು ಬಡ ಕುಟುಂಬಗಳಿಗೆ ದಾನ ಕೃಷಿಕನಿಂದ ಸುಮಾರು ಪ್ರತಿವರ್ಷ 20 ರಿಂದ 25 ಲಕ್ಷದವರೆಗೂ ದಾನ ಮಾಡುವ ಮೂಲಕ ಅಥಣಿಯಲ್ಲಿ ಓರ್ವ ರೈತ ಆಧುನಿಕ ಕರ್ಣ ಎಂದು ಖ್ಯಾತಿ ಹೊಂದಿದ್ದು, ರಾಜ್ಯದ ಗಮನವನ್ನು ಕುಟುಂಬ ಸೆಳೆಯುತ್ತಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ರೈತ ಮಹಾವೀರ ಪಡನಾಡ ರಾಜ್ಯದಿಂದ ಬಡ ಜನರಿಗೆ ಬಂಗಾರ, ಬೆಳ್ಳಿ, ಪಾತ್ರೆ, ದವಸ – ಧಾನ್ಯ, ವಸ್ತ್ರ, ಮತ್ತು ಶಾಲೆ ಮಕ್ಕಳಿಗೆ ನೋಟ್ ಬುಕ್, ಪೆನ್ನು, ಬ್ಯಾಗ್ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಣ ಸಹಾಯ ಮಾಡುತ್ತಿದ್ದಾರೆ. ಪ್ರತಿ ವರ್ಷ 25 ಲಕ್ಷ ರೂ. ಅಧಿಕ ಹಣ ಬಡವರಿಗೆ ಮೀಸಲಾಗಿಟ್ಟು ತಾಲೂಕಿನಲ್ಲಿ ದಾನಶೂರ ಕರ್ಣ ಎಂದೇ ಖ್ಯಾತಿ ಹೊಂದಿದ್ದಾರೆ.
ಯಾವುದೇ ಪ್ರಚಾರ ಬಯಸಿದರೆ ಹಾಗೂ ಅವರಿಂದ ಮುಂದೆ ಸಹಾಯ ನಿರೀಕ್ಷೆ ಮಾಡದೇ ಮಹಾಭಾರತದ ಕರ್ಣನ ರೀತಿ ಅಥಣಿ ತಾಲೂಕಿನ ಆಧುನಿಕ ಕರ್ಣ ಮಹಾವೀರ ಪಡನಾಡ ಸಮಾಜಕ್ಕೆ ತಾನು ದುಡಿದಿದ್ದರಲ್ಲಿ ಒಂದು ಪಾಲು ಬಡವರಿಗೆ ಹಂಚುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ. ಪಡನಾಡ ಕುಟುಂಬಕ್ಕೆ ಆ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಶಿವಯೋಗಿ ನಾಡಿನ ಜನರು ಆಶಿಸುತ್ತಿದ್ದಾರೆ.
ಮಹಾವೀರ ಪಡನಾಡ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದಾರೆ. ತಂದೆ ದಿ. ಬಾಬುರಾವ ಸತ್ಯಪ್ಪ ಪಡನಾಡ ಅವರು ಬಡವರಿಗೆ ತಮ್ಮ ಕಡೆಯಿಂದ ಮಾಡುತ್ತಿದ್ದನ್ನ ಕಂಡು ಪ್ರೇರಪಣೆಗೊಂಡು ದಾನ ಧರ್ಮ ಮಾಡುತ್ತಾ ಬಂದಿರುವುದನ್ನು ರೂಢಿಯನ್ನು ಮಹಾವೀರ ಪಡನಾಡ ಮುಂದುವರಿಸಿಕೊಂಡು ಬಂದಿದ್ದಾರೆ.
ಸದ್ಯ ತಾವು ಕೃಷಿಯಲ್ಲಿ ದುಡಿದ ಒಂದು ಭಾಗದ ಹಣವನ್ನು ಸಾವಿರಕ್ಕೂ ಹೆಚ್ಚು ಬಡವರಿಗೆ ವಿವಿಧ ಬೆಲೆಬಾಳುವ ವಸ್ತುಗಳು, ಹಂಚುವ ಮುಲಕ ತಂದೆ ತಾಯಿ ಸ್ಮರಣಾರ್ಥ ಕಾರ್ಯಕ್ರಮ ಆಚರಣೆಯನ್ನು ಕಳೆದ ಇಪ್ಪತ್ತು ನಾಲ್ಕು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ.
ಮಹಾವೀರ ಪಡನಾಡ ಎಂಬ ಕೃಷಿಕನಿಂದ ಸುಮಾರು ಪ್ರತಿವರ್ಷ 20 ರಿಂದ 25 ಲಕ್ಷದವರೆಗೂ ದಾನ ಸುಮಾರು 25 ವರ್ಷದಿಂದ ದಾನ ಮಾಡುತ್ತಾ ಬಂದಿರುವ ಪಡನಾಡ ಕುಟುಂಬ ಕಾಗವಾಡ ವಿದ್ಯಾಸಾಗರ ಶಾಲೆಗೆ 25 ಲಕ್ಷ ದಾನ, ಬೆಳಗಾವಿಯ ಭಗವಾನ ಆಂಗ್ಲ ಮಾಧ್ಯಮ ಶಾಲೆಗೆ 11 ಲಕ್ಷ ದಾನ, ಹುದ್ದಾರ ಶಿಕ್ಷಣ ಸಂಸ್ಥೆಗೆ 1 ಲಕ್ಷ ದಾನ ಇತರ ಶಿಕ್ಷಣ ಸಂಸ್ಥೆಗಳಿಗೆ 3 ಲಕ್ಷ ದಾನ ಹೀಗೆ 40 ಲಕ್ಷ ಹಣ ದಾನ ಮಾಡಿದ ಮಹಾವೀರ ಪಡನಾಡ.
ಇದರ ಜೊತೆಗೆ ಸುಮಾರು 180 ಜೈನ ಪಂಡಿತರಿಗೆ ಬಟ್ಟೆ ಹಾಗೂ ಹಣದ ರೂಪದಲ್ಲಿ ದಾನ, ಮಕ್ಕಳಿಗೆ, ಮಹಿಳೆಯರಿಗೆ ಬಟ್ಟೆ ದಾನ ಮಾಡುವ ಮೂಲಕ ಈ ಭಾಗದಲ್ಲಿ ಕಲಿಯುಗ ಕರ್ಣರಾಗಿರುವ ಮಹಾವೀರ ಪಡನಾಡ ಕಳೆದ ವರ್ಷ ಐನಾಪೂರ ಪದ್ಮಾವತಿ ಶಾಲೆಗೆ ಸುಮಾರು 50 ಲಕ್ಷ ರೂ. ದಾನ ಮಾಡಿದ್ದಾರೆ
ಜನ ಸೇವೆಯೇ ಜರ್ನಾದನ ಸೇವೆಯೆಂದು ಪಡನಾಡ ಕುಟುಂಬಸ್ಥರು ಫಲಾಪೇಕ್ಷೆ ಇಲ್ಲದೆ ಮಾಡುವ ಕಾರ್ಯ ಎಲ್ಲರ ಗಮನಸೆಳೆದಿದೆ, ಇವರ ಸಮಾಜಪರ ಕಾರ್ಯ ಮುಂದುವರೆಯಲಿ ಎಂಬುದು ಎಲ್ಲರ ಆಶಯವಾಗಿದೆ.