ಉ.ಕ ಸುದ್ದಿಜಾಲ ವಿಜಯಪುರ :

ಡಿಕೆಶಿ ಸಿಎಂ ಆಗ್ತಾರೆ ; ದಾವಣಗೆರೆ ಶಾಸಕ ಶಿವಗಂಗ ಹೇಳಿಕೆ, ಅಧಿಕಾರ ಹಂಚಿಕೆ ಸೂತ್ರ ವಿಚಾರವಾಗಿ ವಿಜಯಪುರದಲ್ಲಿ ಶಾಸಕ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ.

ಡಿಕೆಶಿ ಸಿಎಂ ಆಗ್ತಾರೆ? – ಶಾಸಕ ಲಕ್ಷ್ಮಣ ಸವದಿ ಹೇಳಿದ್ದಿಷ್ಟು

ಅಧಿಕಾರ ಹಂಚಿಕೆ ವಿಚಾರವೇ ಗೊತ್ತಿಲ್ಲ ಎಂದ ಸವದಿ. ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹೈಕಮಾಂಡ್ ಮಟ್ಟದಲ್ಲಿ ಯಾವ ಚರ್ಚೆಯಾಗಿದೆ ಎಂದು ಗೊತ್ತಿಲ್ಲ. ನನಗಾಗಲಿ ಶಾಸಕರಿಗೆ, ಸಚಿವರಿಗೆ ಯಾರಿಗೂ ಗೊತ್ತಿಲ್ಲ. ಏನು ಮಾತುಕತೆಯಾಗಿದೆ ಎಂಬುದನ್ನ ಹೈಕಮಾಂಡ್ ಹೇಳಬೇಕು.

ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಅಥವಾ ಹೈಕಮಾಂಡ್ ಮಾತ್ರ ಹೇಳಲು ಸಾಧ್ಯ ಎಂದ ಸವದಿ. ಸಿಟಿ ರವಿ ಅವರಿಗೆ ಬೆದರಿಕೆ ಪತ್ರ ವಿಚಾರ, ಅವರೇ ಲೆಟರ್ ಬರೆದುಕೊಂಡಿರಬೇಕು, ಅದನ್ನಾರು ಮಾಡ್ತಾರೆ. ಸಿಟಿ ರವಿಗೆ ಸವದಿ ಟಾಂಗ್ ನೀಡಿದ್ದಾರೆ.

ಅನಾಮದೇವಿಯ ಪತ್ರ ನಿಮಗೂ, ಮಾಧ್ಯಮದವರಿಗೂ ಬರುತ್ತೆ. ಅದು ಲೆಕ್ಕಕ್ಕೆ ಬರಲ್ಲ ಅಡ್ರೆಸ್ ಹಾಕಿ ಹಾಕಿದರೆ ಅದು ಲೆಕ್ಕಕ್ಕೆ ಬರುತ್ತದೆ. ಅನಾಮಧೇಯ ಎಂದರೆ ಅದು ಸುಳ್ಳು ಇರುವುದು ಸತ್ಯವು ಇರಬಹುದು. ಅದಕ್ಕೆ ಆಧಾರ ಇರುವುದಿಲ್ಲ ಎಂದ ಸವದಿ.

ಲಕ್ಷ್ಮಣ್ ಸವದಿ ಘರ್ ವಾಪಸಿ (ಬಿಜೆಪಿ ಸೇರ್ಪಡೆ)ಆಗುವ ವಿಚಾರ…

ನಾನು ಒಂದು ಮನೆಯಲ್ಲಿ ಇದ್ದೇನೆ ಮತ್ತ್ಯಾವ ಘರ್ ವಾಪಸ್ಸಿ ಎಂದ ಸವದಿ. ಜಗದೀಶ್ ಶೆಟ್ಟರಿಗೆ ಹಾಗೂ ನನಗೆ ಯಾಕೆ ತಳಕು ಹಾಕುತ್ತೀರಿ. ಅವರದ್ದೇ ಬೇರೆ ನೆಮ್ಮದಿ ಬೇರೆ.

ಬಿಜೆಪಿಗೆ ಸೇರ್ಪಡೆಯಾಗುವ ಹಿನ್ನೆಲೆ ಮಹಾರಾಷ್ಟ್ರದ ಚುನಾವಣೆಯಲ್ಲಿ ಸಕ್ರೀಯರಾಗಿಲ್ಲ ಎನ್ನುವ ವಿಚಾರ. ಸ್ಥಳೀಯ ಚುನಾವಣೆಯಲ್ಲಿ ನನಗೆ ಜವಾಬ್ದಾರಿ ಕೊಟ್ಟಿದ್ದರು. ಪಠಾಣ್ ಅಭ್ಯರ್ಥಿಯಾಗಿರುವುದರಿಂದ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲೆ ಇತ್ತು. ಅಲ್ಲಿ ಹೋಗಿ ಕೆಲಸ ಮಾಡಿ ಯಶಸ್ವಿಯಾಗಿ ಗೆದ್ದಿದ್ದೇವೆ ಎಂದರುಮ

ಸಂಪುಟ ಪುನಾರಚನೆ ಹಾಗೂ ವಿಸ್ತರಣೆ ವಿಚಾರ

ನನಗೆ ಯಾವುದು ಗೊತ್ತಿಲ್ಲ ಇದು ಮುಖ್ಯಮಂತ್ರಿಗಳು, ಹೈಕಮಾಂಡ್ ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗುತ್ತದೆ. ಅನೇಕ ಬಾರಿ ನಾನು ಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ.

ನನಗೆ ಜವಾಬ್ದಾರಿ ಕೊಟ್ಟರೆ ಅದನ್ನು ನಿರ್ವಹಿಸುವ ಸಾಮರ್ಥ್ಯ ಇದೆ ಎಂದು ಪರೋಕ್ಷವಾಗಿ ಸಚಿವ ಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಲಕ್ಷ್ಮಣ್ ಸವದಿ. ಸಚಿವ ಸ್ಥಾನ ಕೊಟ್ಟರು ಸಂತೋಷ ಕೊಡದೆ ಇದ್ದರೂ ಸಂತೋಷ ಅಪಹಪಿಸುವ ವ್ಯಕ್ತಿ ಅಲ್ಲ ಎಂದರು.