ಉ.ಕ ಸುದ್ದಿಜಾಲ ಕಾಗವಾಡ :
ವಿದ್ಯುತ್ ತಂತಿಯಿಂದ ಬೇಸತ್ತ ಗ್ರಾಮಸ್ಥರು, ಸಾವನ್ನ ಕೈಯಲ್ಲಿ ಹಿಡಿದು ಜನ ಸಂಚರಿಸುವ ಪರಸ್ಥಿತಿ ನಿರ್ಮಾಣ ಏನಾದರು ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರರು ಎಂದು ಸಾರ್ವಜನಿಕರು ಪ್ರಶ್ನೆ ಮೋಳೆ ಗ್ರಾಮದ ಹುದ್ದಾರ ತೋಟದ ವಸತಿಯಲ್ಲಿ ವಿದ್ಯುತ್ ಕಂಬಗಳಿಗೂ ನೆಲಕೆ ತಾಗುವಂತಾಗಿವೆ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಹುದ್ದಾರ ತೋಟದ ವಸತಿಯಲ್ಲಿ ಹಲವಾರು ಬಾರಿ ವಿದ್ಯುತ್ ಇಲಾಖೆಗೆ ಮನವಿ ಮಾಡಿದರು ಡೊಂಟ್ ಕೇರ ವಿದ್ಯುತ್ ತಂತಿ ಕೈಗೆ ಎಟುಕುವಂತಿದೆ. ಗಿಡ ಗಂಟಿಗಳು ತಂತಿಗೆ ತಗುಲುವಂತೆ ಬೆಳೆಯುತ್ತಿವೆ. ಇವು ಸ್ಪರ್ಶಿಸಿದರೆ ಭೂಮಿ ಮೇಲೆ ವಿದ್ಯುತ್ ಹರಿದು ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳಿಯರು ಆಕ್ರೋಶ
ವಿದ್ಯುತ್ ತಂತಿಗಳು ಭೂಮಿಗೆ ಮುಟ್ಟುವ ಸ್ಥಿತಿಗೆ ತಲುಪಿ ವರ್ಷ ಕಳೆದಿದೆ. ತಂತಿಗಳನ್ನು ಬಿಗಿ ಮಾಡದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈ ಕುರಿತು ಹಲವಾರು ಬಾರಿ ಐನಾಪೂರ ಸಹಾಯಕ ಅಭಿಯಂತರರಿಗೆ ಮನವಿ ಮಾಡಿದರು ಕೇರ ಮಾಡದ ಅಧಿಕಾರಿಗಳು