ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಎಣ್ಣೆ ಏಟಲ್ಲಿ ಹಿಗ್ಗಾಮುಗ್ಗಾ ಥಳಿತ ಸ್ಥಳದಲ್ಲೇ ಪ್ರಾಣ ಬಿಟ್ಟ ವ್ಯಕ್ತಿ ಬೆಳಗಾವಿ ಜಿಲ್ಲೆಯ ಮೂಡಲಗಿಯ ಬಾರ್ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಲಕ್ಷ್ಮಣ ಮರನೂರ(45) ಕೊಲೆಯಾದ ವ್ಯಕ್ತಿ.

ರಂಗಪ್ಪ ಪಾಟೀಲ್, ಈರಪ್ಪ ತುಂಗಳ ಕೊಲೆ ಮಾಡಿದ ಆರೋಪಿಗಳು ನಿನ್ನೆ ಮಧ್ಯಾಹ್ನ ಬಾರಿಗೆ ಬಂದು ಮದ್ಯಪಾನ ಮಾಡ್ತಿದ್ದ ಲಕ್ಷ್ಮಣ, ಲಕ್ಷ್ಮಣ ಕುಳಿತಿದ್ದ ಟೇಬಲ್ ಪಕ್ಕದಲ್ಲಿಯೇ ಕುಳಿತಿದ್ದ ಇಬ್ಬರು ಆರೋಪಿಗಳು ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಮೂವರ ಮಧ್ಯ ಜಗಳ ನಡೆದಿದೆ.

ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಜಗಳ‌ ಈ ವೇಳೆ ಲಕ್ಷ್ಮಣ ಮೇಲೆ ಹಲ್ಲೆ ಮಾಡಿದ್ದ ರಂಗಪ್ಪ ಹಾಗೂ ಈರಪ್ಪ ಇಬ್ಬರ ಹಲ್ಲೆಯಿಂದ ಸ್ಥಳದಲ್ಲಿಯೇ ಪ್ರಾಣ ಬಿಟ್ಟ ಲಕ್ಷ್ಮಣ ಕೂಡಲೇ ಬಾರ್ ನಿಂದ ಶವ ಹೊರ ತಂದು ಬಿಸಾಡಿದ್ದ ಇಬ್ಬರೂ ಕಿರಾತಕರು

ಸಹಜ ಸಾವೆಂದು ಬಿಂಬಿಸಲು ಮುಂದಾಗಿದ್ದ ಇಬ್ಬರೂ ಕೀಚಕರು ಲಕ್ಷ್ಮಣ ಮೇಲೆ ಹಲ್ಲೆ ಮಾಡುವ ವಿಡಿಯೋ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆ ನಂತರ ಸ್ಥಳಕ್ಕೆ ಬಂದು ಸ್ಥಳೀಯರನ್ನು ವಿಚಾರಿಸಿದ್ದ ಪೊಲೀಸರು

ಪೊಲೀಸರ ವಿಚಾರಣೆಯಲ್ಲಿ ಗಲಾಟೆಯಾದ ಕುರಿತು ಮಾಹಿತಿ ಕೂಡಲೆ ಇಬ್ಬರನ್ನು ಪತ್ತೆ ಹಚ್ಚಿ ಬಂಧಿಸಿರುವ ಮೂಡಲಗಿ ಪೊಲೀಸರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.