ಕಲಬುರಗಿ :

ನೀರು ತುಂಬಿದ್ದ ತಗ್ಗು ಗುಂಡಿಯಲ್ಲಿ‌ ಈಜಾಡಲು ಇಳಿದು ಮೂವರು ಬಾಲಕರು ದುರ್ಮರಣಗೊಂಡಿರುವ ಘಟನೆ ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಸಂಭವಿಸಿದೆ.

ದರ್ಶನ್ (12), ಪ್ರಶಾಂತ (10), ವಿಘ್ನೇಶ್ (9) ಸೇರಿದಂತೆ ಮೂವರು ಬಾಲಕರು ಸಾವನಪ್ಪಿದ್ದಾರೆ. ಮನೆ‌ ಕಟ್ಟುವುದಕ್ಕೆ ಕಾಲಮ್ ಹಾಕಿ ತಗ್ಗು ತೋಡಲಾಗಿತ್ತು. ಕಳೆದ ರಾತ್ರಿ ಸುರಿದ ಧಾರಕಾರ ಮಳೆಯಿಂದ ತಗ್ಗುಗುಂಡಿ‌ ಜಲಾವೃತವಾಗಿತ್ತು.

ಈ ಕುರಿತು ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.