ಉ.ಕ ಸುದ್ದಿಜಾಲ ಅಥಣಿ :
ಕಳೆದ ಆರು ತಿಂಗಳಿಂದ ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಮೊಸಳೆಯನ್ನ ಸೆರೆಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ ಸ್ಥಳೀಯರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಅಗ್ರಣಿ ನದಿಯಲ್ಲಿ ಆಗಗ ಕಾಣಿಸಿಕೊಳ್ಳುತ್ತಿದ್ದ ಆರು ಅಡಿ ಧೈತ್ಯ ಗಾತ್ರದ ಮೊಸಳೆಯನ್ನ ಗ್ರಾಮದ ಯುವಕರು ರಾತ್ರಿ ಹೊತ್ತು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ನಿನ್ನೆ ಸಾಯಂಕಾಲ 4 ಗಂಟೆಯಿಂದ ಮೊಸಳೆ ಹಿಡಿಯಲು ಹರಸಾಹಸ ಪಟ್ಟ ಯುವಕರು ಕಡೆಗೆ ತಡ ರಾತ್ರಿ 10 ಗಂಟೆ ಸುಮಾರಿಗೆ ಕಟ್ಟಿಗೆ ಹಾಗೂ ಜಾಳಿಗೆಯ ಸಹಾಯದಿಂದ ಮೊಸಳೆ ಸೆರೆ ಹಿಡಿದಿದ್ದಾರೆ.
ಯುವಕನೊಬ್ಬ ಮೊಸಳೆಯನ್ನ ಹೆಗಲ ಮೇಲೆ ಹೊತ್ತು ಗ್ರಾಮ ದ್ವಾರದವರೆಗೆ ತಂದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಯುವಕರ ಈ ಸಾಹಸಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.