ಉ.ಕ ಸುದ್ದಿಜಾಲ ರಾಯಬಾಗ :

ಎಸ್‌ಡಿಎ ರುದ್ರಣ್ಣ ಅತ್ಮಹತ್ಯೆ ಪ್ರಕರಣ. ಮಾದ್ಯಮಗಳಿಗೆ ರುದ್ರಣ್ಣ ಸಹೋದರಿ ಶ್ರೀದೇವಿ ಹೇಳಿಕೆ. ನಮ್ಮ ಅಣ್ಣನ ಸಾವಿಗೆ ಅನ್ಯಾಯವಾಗಿದೆ. ನಮ್ಮಣ್ಣ ಸಾಯುವ ಹಿಂದಿನ ದಿನ ವಿಡೀಯೋ ಕಾಲ್‌ನಲ್ಲಿ ಮಾತನಾಡಿದ್ದೆ. ಆ ಸಂದರ್ಭದಲ್ಲಿ ಯಾವುದೇ ವಿಷಯಗಳ ಬಗ್ಗೆ ಚರ್ಚೆ ಮಾಡಿಲ್ಲ.

ಮಾದ್ಯಮಗಳಿಗೆ ರುದ್ರಣ್ಣ ಸಹೋದರಿ ಶ್ರೀದೇವಿ ಹೇಳಿಕೆ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ‌ ಮುಗಳಖೋಡ‌ ಪಟ್ಟಣದ ತೋಟದ ವಸತಿಯಲ್ಲಿರುವ ರುದ್ರಣ್ಣ ಅವರ ಮನೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ನಮ್ಮ ಅಮ್ಮನ‌ ಮುಂದೆಯೂ ಯಾವುದೇ ವಿಷಯ ಹೇಳಿಕೊಂಡಿಲ್ಲ.

ಏನೇ ಸಮಸ್ಯೆ ಇದ್ರೂ ನಮ್ಮ ಅಣ್ಣ ಹಾಗೂ ಅತ್ತಿಗೆ ಇಬ್ಬರೂ ಸೇರಿ ಬಗೆಹರಿಸಿಕೊಳ್ಳುತ್ತಿದ್ದರು. ನಮ್ಮ ಅಣ್ಣನ ಸಾವಿಗೆ ನ್ಯಾಗ ಸಿಗಬೇಕು ಎಂದ ರುದ್ರಣ್ಣ ಸಹೋದರಿ.