ಉ.ಕ ಸುದ್ದಿಜಾಲ ಕಾಗವಾಡ :

ಶಾಸಕ ರಾಜು ಕಾಗೆ ಎಡವಟ್ಟಿನ ಮಾತಿನ ಮೂಲಕ ರಾಜ್ಯದಲ್ಲಿ ಈ ಹಿಂದೆಯೂ ಸುದ್ದಿಯಲ್ಲಿದ್ದರು. ಆದ್ರೆ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಶಾಸಕ ರಾಜು ಕಾಗೆ ಮಾತನಾಡಿದ ಆ ಒಂದು ಮಾತು ಮತ್ತೆ ಗಡಿ ರೈತರನ್ನ ಕೆರಳಿಸಿದೆ. ಹಾಗಿದ್ರೆ ಆ ಮಾತು ಯಾವುದು ಅಂತೀರಾ ಈ ಸ್ಟೋರಿ ನೋಡಿ.

ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನ ಸಭಾ ಕ್ಷೆತ್ರದ ಗಡಿ ರೈತರ ಬಹು ನಿರೀಕ್ಷಿತ ಯೋಜನೆ ಬಸವೇಶ್ವರ ಏತ ನೀರಾವರಿ ಯೋಜನೆ ಕಳೆದ 8 ವರ್ಷಗಳಿಂದ ಕು‌ಂಟುತ್ತ ಸಾಗಿದೆ ಇದೆ ವಿಚಾರವಾಗಿ ಗಡಿ ರೈತರು ಮಾಜಿ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಸೋಲಿನ ರುಚಿ ತೋರಿಸಿದ್ರು. ನೀರಾವರಿ ಪೂರ್ಣ ಗೊಳಿಸುವ ಭರವಸೆ ನೀಡಿದ್ದ ಶಾಸಕ ಕಾಗೆ ಪ್ರತಿ ದಿನ ಹುಸಿ ಮಾತನಾಡುವ ಮೂಲಕ ರೈತರ ನಿರೀಕ್ಷೆ ಹುಸಿ ಮಾಡಿದ್ದಾರೆ.

ಹೌದು.. 2022 ರ ವಿಧಾನಸಭಾ ಚುನಾವಣೆಯಲ್ಲಿ ಈಗಿನ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಚುನಾವಣೆ ಬಳಿಕ ಮೂರು ತಿಂಗಳಲ್ಲೇ ಕಾಲುವೆ ನೀರು ಹರಿಸುವ ಭರವಸೆ ನೀಡಿದ್ರು. ಇಬ್ಬರು ನಾಯಕರ ಮಾತಿಗೆ ಮರುಳಾದ ಜನ ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ನೀಡುವ ಮೂಲಕ ಸೋಲಿನ ಭೀತಿಯಲ್ಲಿ ರಾಜು ಕಾಗೆಗೆ ಕ್ಷೇತ್ರದ ಜನ ಮತ್ತೆ ಅಧಿಕಾರದ ಪಟ್ಟ ನೀಡಿದ್ರು.

ಆದ್ರೆ ಚುನಾವಣೆ ಬಳಿಕ ಸೈಲೆಂಟ್ ಆದ ರಾಜು ಕಾಗೆ ನಾಲಿಗೆಗೆ ಬಣ್ಣ ಹಚ್ಚಲು ಸುರು ಮಾಡಿದ್ರು. ಬಸವೇಶ್ವರ ಎತ ನೀರಾವರಿ ವಿಚಾರವಾಗಿ ಟೊಂಕ್ ಕಟ್ಟಿ ನಿಲ್ಲಬೇಕಿದ್ದ ಕ್ಷೇತ್ರ ಶಾಸಕ ರಾಜು ಕಾಗೆ ಮಾತು ಬದಲಾಯಿಸಲು ಶುರು ಮಾಡಿದ್ರು. ಮೂರು ತಿಂಗಳಲ್ಲೇ ನೀರು ಪೂರೈಕೆ ಮಾಡ್ತೀನಿ ಅಂದೋರು.

ಒಂದುವರೆ ವರ್ಷವಾದ್ರೂ ನೀರಾವರಿಗೆ ವಿಚಾರದಲ್ಲಿ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ನನಗೆ ಸಾಕಾಗಿದೆ ನಾನು ಆತ್ಮ ಹತ್ಯೆ ಮಾಡಿಕೊಳ್ಳೋದೊಂದೇ ಬಾಕಿ ಎಂದು ಸ್ವ ಸರ್ಕಾರದ ವಿರುದ್ಧ ಮಾತನಾಡಿದ್ದ ಕಾಗೆ. ಕಲಾಪದಲ್ಲಿ ನಾನು ಹಾಗೆ ಅಂದಿಲ್ಲ ಎಂದು ಮರು ಮಾತನಾಡಿದ್ದು ಎಕೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮ ಒಂದರಲ್ಲಿ ವೇದಿಕೆ ಮೇಲೆ ಬಸವೇಶ್ವರ ಏತ ನೀರಾವರಿ ವಿಚಾರದಲ್ಲಿ ಸರ್ಕಾರಕ್ಕೆ ನಾನು ಹತ್ತು ಬಾರಿ ಮನವಿ ಮಾಡಿದ್ದೀನಿ ಆದ್ರೆ ಸರ್ಕಾರ ನನ್ನ ಮಾತಿಗೆ ಸ್ಪಂದಿಸುತ್ತಿಲ್ಲ ಎಂಬ ಮಾತಿನ ಮೂಲಕ ಸ್ವ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಇದೆ ವಿಚಾರದಲ್ಲಿ ರಾಜ್ಯದಲ್ಲಿ ಸುದ್ದಿ ಹರಿದಾಡಿದವು.

ಇದೆ ಮಾತಿಗೆ ಬೆಳಗಾವಿಯಲ್ಲಿ ಮೊನ್ನೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಶಾಸಕ ರಾಜು ಕಾಗೆ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ಗೊಂಡು ನಾನು ಆತ್ಮಹತ್ಯ ಮಾಡಿಕೊಳುತ್ತೇನೆ ಎಂಬ ಮಾತಿಗೆ ನಾನು ಹಾಗೆ ಮಾತನಾಡಿಲ್ಲ ಅದು ಸುಳ್ಳು ಎಂದು ಮಾತನ್ನ ತಿರುಚಿದ್ರು.

ಆದ್ರೆ ನಿನ್ನೆ ಮತ್ತೆ ಕಾಗವಾಡ ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಶಾಸಕ ರಾಜು ಕಾಗೆ ಬಸವೇಶ್ವರ ಎತ ನೀರಾವರಿ ವಿಚಾರವಾಗಿ ಮತ್ತೆ ಸ್ವ ಸರ್ಕಾರದ ವಿರುದ್ಧ ಮಾತನಾಡಿದ್ದು ಸರ್ಕಾರ ನಿರ್ಲಕ್ಷ ತೋರುತ್ತಿದೆ ಎಂದು ಮಾತನಾಡಿದ್ದಾರೆ.

ಒಟ್ಟಿನಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಮಾತಿಗೆ ಕ್ಷೇತ್ರದ ಜನತೆ ಹುಸಿಯಾಗಿದ್ದು ಹೀಗೆ ಪದೆ ಪದೆ ಮಾತು ಬದಲಾಯಿಸುತ್ತಿರುವ ಶಾಸಕ ರಾಜು ಕಾಗೆ ಅವರ ಹುಸಿ ಮಾತು ಮತ್ತೆ ಟಿಕೆಗೆ ಗುರಿಯಾಗಿದೆ.