ಉ.ಕ ಸುದ್ದಿಜಾಲ ಕಾಗವಾಡ :

ಯಮಕನಮರಡಿ ಉಪ ತಹಶೀಲ್ದಾರ ಆಗಿದ್ದ ರಾಕೇಶ ಬುವಾ ಇತ್ತೀಚಿಗಷ್ಟೇ ಗ್ರೇಡ್-2 ತಹಶಿಲ್ದಾರ ಆಗಿ ಪದೋನ್ನತಿ ಪಡೆದಿದ್ದ ಇವರನ್ನು ಕಾಗವಾಡ ತಾಲೂಕಿನ ಗ್ರೇಡ್-2 ತಹಶೀಲ್ದಾರರಾಗಿ ಕರ್ನಾಟಕ ಸರಕಾರ ನಿಯುಕ್ತಿಗೊಳಿಸಿ ಆದೇಶಿಸಿತ್ತು.

ಈ ಬೆನ್ನಲೆ ಇಂದು (ಮಂಗಳವಾರ) ರಾಕೇಶ್ ಬುವಾ ಬೆಳಗಾವಿ‌ ಜಿಲ್ಲೆಯ‌ ಕಾಗವಾಡದಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಎಸಿ ಸಂತೋಷ ಕಾಮಗೌಡ ಸ್ವಾಗತಿಸಿದರು. ಕಾಗವಾಡ ತಹಶೀಲ್ದಾರ ರಾಜೇಶ್ ಬುರ್ಲಿ ಹಾಗೂ ಸಿಬ್ಬಂದಿಗಳು ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು.