ಉ.ಕ‌ ಸುದ್ದಿಜಾಲ ಧಾರವಾಡ :

ಶ್ರೀಧರ ಅನ್ನೋ ಯುವಕನನ್ನು ಮುಸ್ಲಿಂ ಆಗಿ ಮತಾಂತರ ಮಾಡಿದ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ.

ಧಾರವಾಡದಲ್ಲಿ ಘಟನೆ ಖಂಡಿಸಿದ ಮುತಾಲಿಕ, ಈ ಘಟನೆಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಆತ ಹುಡುಗಿಯನ್ನು ಭೇಟಿಯಾಗಲು ಬಂದಿದ್ದನೋ ಏನೋ ಗೊತ್ತಿಲ್ಲ. ಆತನಿಗೆ ಬಲವಂತದ ಖತ್ನಾ ಮಾಡಲಾಗಿದೆ. ಪಿಸ್ತೂಲು ನೀಡಿ ಫೋಟೋ ತೆಗೆದಿದ್ದಾರೆ, 35 ಸಾವಿರ ಹಣವನ್ನು ಖಾತೆಗೆ ಹಾಕಿದ್ದಾರೆ. ಆತನೇ ಇದೀಗ ದೂರು ನೀಡಿದ್ದಾನೆ.

ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದೆ. ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮತಾಂತರ ಕಾಯ್ದೆ ಅಡಿ ಕೇಸು ದಾಖಲಾಗಬೇಕು. 11 ಜನರಷ್ಟೇ ಇದರ ಹಿಂದೆ ಇಲ್ಲ
ಮಸೀದಿ, ಮದರಸಾ ಕೆಲಸ ಮಾಡುತ್ತಿವೆ. ಸರಿಯಾಗಿ ತನಿಖೆ ಮಾಡಬೇಕು. ಅಂದಾಗ ಮಾತ್ರ ಇಂಥ ಪ್ರಕರಣಗಳು ಹೊರಗೆ ಬರುತ್ತವೆ. ಈ ಬಗ್ಗೆ ನಾನು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಯಾವ ಯಾವ ಮಸೀದಿಗಳಲ್ಲಿ ಮತಾಂತರ ನಡೆಯುತ್ತಿವೆ ಅನ್ನೋ ಮಾಹಿತಿ ಕೊಡುತ್ತೇನೆ ಎಂದರು.