ಉ.ಕ ಸುದ್ದಿಜಾಲ ಬೆಳಗಾವಿ :

ರಾಜ್ಯದಲ್ಲಿನ ಗಣೇಶೋತ್ಸವ ಪೆಂಡಾಲ್ ಗಳಲ್ಲಿ ಸಾವರ್ಕರ್ ಭಾವಚಿತ್ರ ಹಾಕುವ ವಿಚಾರ ಪ್ರತಿಕ್ರಿಯಿಸಿದ ಸತೀಶ ಹಾರಕಿಹೊಳಿ ಅವರು ಸಾವರ್ಕರ್ ಭಾವಚಿತ್ರ ಹಾಕಿದರೆ, ನಾವು ಬುದ್ಧ, ಬಸವ, ಅಂಬೇಡ್ಕರ್, ರಾಯಣ್ಣನ ಭಾವಚಿತ್ರ ಹಾಕುತ್ತೇವೆ ಪೋಟೋ ಹಾಕುವ ವಿಚಾರ ಅವರವರಿಗೆ ಬಿಟ್ಟದ್ದು. ಹೀಗೆ ಅಂತ ಹೇಳಲು ಆಗುವುದಿಲ್ಲ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಹೇಳಿಕೆ ನೀಡಿದರು.

ಒಂದೇ ಜಾತಿಯವರು ಗಣಪತಿಮೂರ್ತಿ ಪ್ರತಿಷ್ಠಾಪನೆ ಮಾಡುವುದಿಲ್ಲ ಬೇರೆ, ಬೇರೆ ಜಾತಿಯವರು ಗಣೇಶನ ಪ್ರತಿಷ್ಠಾಪನೆ ಮಾಡುತ್ತಾರೆ. ಅವರು ತಮಗೆ ಬೇಕಾದವರ ಪೋಟೋ ಹಾಕುತ್ತಾರೆ ಗಣೇಶ ಉತ್ಸವದಲ್ಲಿ ಧರ್ಮ ತರಬಾರದು, ಆದರೆ ಅವರು ಸಾವರ್ಕರ್ ಪೋಟೋ ಇಟ್ಟರೆ ಉಳಿದವರು ಬೇರೆಬೇರೆಯವರ ಪೋಟೋ ಇಟ್ಟೇ ಇಡ್ತಾರೆ ಎಂದು ಹೇಳಿದರು.