ಉ.ಕ ಸುದ್ದಿಜಾಲ ಚಿಕ್ಕೋಡಿ :

ಚಿಕ್ಕೋಡಿ ತಾಲೂಕಿನಲ್ಲಿ ಕಳೆದ ಒಂದು ವಾರದ ಹಿಂದೆ ಚಿರತೆ ಪ್ರತ್ಯೇಕ್ಷವಾಗಿತ್ತು, ಅದಾದ ಬಳಿಕ ಈಗ ಮತ್ತೆ ಚಿಕ್ಕೋಡಿ ತಾಲೂಕಿನಲ್ಲಿ ಮತ್ತೆ ಚಿರತೆ ದಾಳಿ ಮಾಡಿದೆ. ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ರೈತ ಕೃಷ್ಣಾ ಜಾಧವ  ಎಂಬುವರ ಸೇರಿದ 2 ವರ್ಷದ ಎಮ್ಮೆಯ ಕರುವಿನ ಮೇಲೆ ಚಿರತೆಯ ದಾಳಿ ಮಾಡಿದೆ.

ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಲ್ಲಿ ಮತ್ತೆ ಚಿರತೆಯ ಭಯ ಶುರುವಾಗಿದೆ. 2 ವರ್ಷದ ಎಮ್ಮೆಯ ಕರುವಿನ ಮೇಲೆ ಚಿರತೆಯ ದಾಳಿ ಮಾಡಿದೆ. ಕರುವಿನ ಹೊಟ್ಟೆಯ ಭಾಗವನ್ನು ಹರಿದು ಹಾಕಿದೆ. ಪರಿಣಾಮ ಕರು ಸಾವನ್ನಪ್ಪಿದೆ. ಸ್ಥಳಕ್ಕೆ ಪಶುವೈಧ್ಯಾಧಿಕಾರಿಗಳು ಭೇಟಿಯನ್ನು ನೀಡಿದ್ದಾರೆ.

ಇದೇ ಸಂಧರ್ಭದಲ್ಲಿ ರೈತ ಅಜಯ ಮಾನೆ ಮಾತನಾಡಿ ಇಂಗಳಿ ಗ್ರಾಮದಲ್ಲಿ ಚಿರತೆಯ ಭಯ ಕಾಡುತ್ತಿದೆ.ನಿನ್ನೆ ರಾತ್ರಿ ಸಮಯದಲ್ಲಿ  ಕರುವಿನ ಹೊಟ್ಟೆಯ ಭಾಗ ಚಿರತೆ ಹರಿದು ಹಾಕಿದೆ.ಇದರಿಂದ ಕರು ಸಾವನ್ನಪ್ಪಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ಚಿರತೆಯನ್ನು ಸೆರೆ ಹಿಡಿಯಬೇಕೆಂದು ಅಜಯ ಮಾನೆ ಒತ್ತಾಯಿಸಿದ್ದಾರೆ..