ಉ.ಕ‌ ಸುದ್ದಿ ಜಾಲ‌ ಮೈಸೂರ :

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯನ್ನು ಕೊಂದ  ಗೋಡ್ಸೆ ಬಿಜೆಪಿಗರ ನಾಯಕ. ಮಹಾತ್ಮ ಗಾಂಧೀಜಿಯವರನ್ನು  ಕೊಲ್ಲಲು ಪ್ರೇರೇಪಣೆ ನೀಡಿದ ಸಾವರ್ಕರ್ ಇವರ ನಾಯಕ. ಬ್ರಿಟಿಷರ ಮೇಲೆ ದಾಳಿ ಮಾಡಿ ಬಾಂಬ್ ಎಸೆದು ಜೈಲುಪಾಲಾದ ಸಾವರ್ಕರ್. ಬಿಜೆಪಿ ಪಕ್ಷಕ್ಕೆ ಪೂರ್ವಜರು ಯಾರು? ಇವರ ನಾಯಕರು ಯಾರು? ಎಂದು ಇವರ ಮೂಲ ಹುಡುಕಿದರೆ ತಿಳಿಯುತ್ತದೆ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ರಿಂದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ

ಸಾವರ್ಕರ್ ಗೆ ಬ್ರಿಟಿಷ್ ಸರಕಾರ 50 ವರ್ಷ ಜೀವಾವಧಿ ಶಿಕ್ಷೆಗೆ ಗುರಿಪಡಿಸಿತ್ತು. ಆ ಶಿಕ್ಷೆಯನ್ನು ತಡೆಯಲಾಗದೆ ಕ್ಷಮಾಪಣೆ ಪತ್ರವನ್ನು ಬರೆದು ಹೊರ ಬಂದಿದ್ದ ವ್ಯಕ್ತಿ ಸಾವರ್ಕರ್. ನನ್ನನ್ನು ದಯವಿಟ್ಟು ಬಿಡುಗಡೆ ಮಾಡಿ  ಎಂದು ಅಂಗಲಾಚಿದ್ದ ನಾನು ಇರುವ ತನಕ ಶಾಶ್ವತವಾಗಿ ನಿಮ್ಮ ಸೇವೆಯನ್ನು ಮಾಡಿ ನಿಮ್ಮ  ಸೇವಕನಾಗಿರುತ್ತೇನೆ. ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಹೊರಬಂದ ವ್ಯಕ್ತಿ ಸಾವರ್ಕರ್ ಎಂದು ವಾಗ್ದಾಳಿ ನಡೆಸಿದರು.