ಉ.ಕ ಸುದ್ದಿಜಾಲ ಚಿಕ್ಕಬಳ್ಳಾಪುರ :
ಸಿದ್ದರಾಮಯ್ಯ ಹೇಳ್ತಿದ್ರಲ್ಲ ಸತ್ಯ ಹರಿಶ್ಚಂದ್ರ ಮನೆಯಲ್ಲಿ ಹುಟ್ಟಿದಿನಿ ಅಂತ ನಡಕೊಂತಿದ್ರೂ. ಅವರ ಅವಧಿಯ ಸರ್ಕಾರದಲ್ಲಿ ರಾಜ್ಯವನ್ನು ಸಂಪೂರ್ಣ ಲೂಟಿ ಮಾಡಿದ್ದಾರೆ. ಅವರು ಮಾಡಿರುವ ಎಲ್ಲ ಭ್ರಷ್ಟಾಚಾರಗಳನ್ನು ತೆಪೆ ಹಚ್ಚುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಸರ್ಕಾರದ ವಿರುದ್ಧ ಕೆಲವು ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ. ಎಲ್ಲ ಗುತ್ತಿಗೆದಾರರಿಗೆ ನಾನು ವಿನಂತಿ ಮಾಡುತ್ತೇನೆ. ನಿಮ್ಮ ಸ್ವಯಂ ಪ್ರೇರಣೆಯ ಹೇಳಿಕೆ ನಾ ಅಥವಾ ಯಾರೋ ಪ್ರಚೋದನೆಯಿಂದ ಹೇಳಿದ್ದೀರಾ ಅಂತ ಕೇಳಬೇಕಾಗುತ್ತದೆ ಎಂದು ಸಚಿವ ಶ್ರೀರಾಮಲು ಪ್ರಶ್ನೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಲ್ಲಸಂದ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಉದ್ಘಾಟನೆ ಬಳಿಕ ಮಾತನಾಡಿದ ಅವರು, ನಿಮ್ಮ ಹತ್ತಿರ ಸರ್ಕಾರದ ಮಂತ್ರಿಗಳು ಭ್ರಷ್ಟಾಚಾರದ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಿ. ಕೇವಲ ಸರ್ಕಾರಗಳ ಮೇಲೆ ಮಂತ್ರಿಗಳ ಮೇಲೆ ಆರೋಪ ಮಾಡುವುದು ಶೋಭೆ ತರೋದಿಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ.
ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಯಾರೋ ಹೇಳಿಕೊಟ್ಟಿರೋದ್ರಿಂದ ಈ ರೀತಿ ಹೇಳುವಂತ ಕೆಲಸ ಆಗಿದೆ. ಇದರ ಬಗ್ಗೆ ಈಗಾಗಲೇ ತನಿಖೆ ನಡೀತಾಯಿದೆ. ಆರೋಪ ಮಾಡಿರುವ ಇಂತಹವರ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರ ಮಾಡಬೇಕಾಗುತ್ತದೆ ಎಂದು ಹೇಳಿದರು.