ಉ.ಕ ಸುದ್ದಿಜಾಲ ಕಲಬುರಗಿ :

ಲಾರಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 36 ಜಾನುವಾರುಗಳ ರಕ್ಷಣೆ‌ ಕಲಬುರಗಿ ಜಿಲ್ಲೆಯ ಶಾಹಬಾದ್ ‌ಸಮೀಪದ ತೊನಸನಳ್ಳಿ(S) ಗ್ರಾಮದಲ್ಲಿ ಜಾನುವಾರುಗಳ ರಕ್ಷಣೆ.

ಗೋ ಹತ್ಯೆ ನಿಷೇಧ ಕಾಯ್ದೆಯಡಿ ಮಹ್ಮದ್ ಅಲಂಗಿರ್, ಮಿಯ್ಯಾಸಾಬ್, ಅಂಜುಂ ಬೇಪಾರಿ, ಮೊಸಿನ್, ರಹೀಂ, ಜಾಮೀದ್ ಪಟೇಲ್, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಜಯಪುರ ದಿಂದ ಶಾಹಬಾದ್ ಗೆ ಬರುವಾಗ ಸ್ಥಳಿಯರಿಂದ ಲಾರಿ ನಿಲ್ಲಿಸಿ ವಿಚಾರಣೆ.

ಅನುಮಾನ ಬಂದ ಹಿನ್ನೆಲೆ ಶಾಹಬಾದ್ ಪೋಲಿಸರಿಗೆ ಸ್ಥಳಿಯರಿಂದ ಮಾಹಿತಿ ನೀಡಲಾಗಿದೆ. ಈ ಕುರಿತು ಶಹಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.