ಉ.ಕ ಸುದ್ದಿಜಾಲ ಹುಕ್ಕೇರಿ :

ಇಲ್ಲೊಂದು ತಾಯಿ ಕೋತಿ ತನ್ನ ಅಸುನೀಗಿದ ಕರುಳಿಬಳ್ಳಿಯನ್ನು ಕಳೆದುಕೊಂಡ ರೋದನೆಯನ್ನು ನೋಡಿದರೆ ಕಣ್ಣೀರು ಬರುತ್ತೆ. ಕರುಳು ಚುರ್​ ಅನ್ನುತ್ತೆ.

ಮಕ್ಕಳನ್ನು ಕಳೆದುಕೊಂಡ ಎಂತವರಾದರು ಕಣ್ಣೀರು ಸುರಿಸುವುದು ಸಹಜ. ಇನ್ನು ತಾಯಿಯೇ ಕಥೇಯೇನು? ಕರುಳಬಳ್ಳಿಯನ್ನು ಕಳೆದುಕೊಂಡ ರೋದನೆ ಮಾತ್ರ ಹೇಳತೀರದು. ಅದು ಮನುಷ್ಯರಾದರು ಅಷ್ಟೇ ಪ್ರಾಣಿಯಾದರು ಅಷ್ಟೇ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಕ್ರಾಸ್ ಹೊರವಲಯದಲ್ಲಿ ಕಂಡು ಬಂದ ಘಟನೆ. ತಾನೇ ಹೆತ್ತ ಮಗು ಕಣ್ಣೆದುರೇ ಸಾವನ್ನಪ್ಪಿರೋದನ್ನು ಕಂಡು ತಾಯಿ ಕೋತಿ ರೋದಿಸುತ್ತಿರುವ ದೃಶ್ಯವಿದು.

ಈ ಮೂಕ ಪ್ರಾಣಿಯ ರೋದನೆ ಕಂಡಾಗ ಎಂಥಾ ಕಠೋರ ಮನಸ್ಸಿನವರಿಗೂ ನೋವಾಗದೆ ಇರದು. ರಸ್ತೆ ದಾಟುವಾಗ ಕಾರು ಹರಿದು ಮರಿ ಕೋತಿ ಸಾವನ್ನಪ್ಪಿದೆ. ಇದನ್ನು ಕಣ್ಣೆದುರೇ ಕಂಡ ತಾಯಿ ಮಂಗ ಕಂಬನಿ ಸುರಿಸಿದೆ.

ಇನ್ನು ಕಂಡ ಸ್ಥಳೀಯರು ರಸ್ತೆಯಲ್ಲಿ ನಿತ್ರಾಣವಾಗಿ ಬಿದ್ದ ತಾಯಿ ಮಂಗದ ಉಪಚಾರ ಮಾಡಿದ್ದಾರೆ. ನೀರು ನೀಡಿ ಬಳಿಕ ಚಿಕಿತ್ಸೆ ಮಾಡಿದ್ದಾರೆ.

ತಾಯಿ ಕೋತಿಯ ರೋದನೆ ಕಂಡ ಗ್ರಾಮಸ್ಥರು ಸಹ ಕಣ್ಣೀರು ಸುರಿಸಿದ್ದಾರೆ. ಕೊನೆಗೆ ನಿಡಸೋಸಿ ಗ್ರಾಮಸ್ಥರು ಮರಿ ಕೋತಿಯ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ.