ಉ.ಕ ಸುದ್ದಿಜಾಲ ಅಥಣಿ :
ಕಳೆದ ಮೂರು ವರ್ಷಗಳ ಹಿಂದೆ ಒಂದು ಬಾವಿ ಗಾಗಿ ಜೋಡಿ ಕೊಲೆ ನಡೆದಿತ್ತು. ಇದೇ ವಿಚಾರವಾಗಿ ಏಳು ಜನ ಆರೋಪಿಗಳು ಜೈಲಿನ ಕಂಬಿಯಲ್ಲಿದ್ದರು. ಕಣ್ಣಾರೆ ನೋಡಿದ್ದ ಕೊಲೆ ಬಗ್ಗೆ ಸಾಕ್ಷಿ ಹೇಳಲು ಹೊರಟಿದ್ದ ಆದ್ರೆ ಆತ ಕೋರ್ಟ್ ಗೆ ಹೋಗದೆ. ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಹೀಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ವ್ಯಕ್ತಿಯ ಹೆಸರು ದಾದಾಸೋ ಇಮಗರ(56) ಅಂತಾ ಇತ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ಕೊಸಾರಿ ಅನ್ನೋ ಕುಗ್ರಾಮದಂವ.
ಮೂರು ವರ್ಷದ ಹಿಂದೆ ಒಂದು ಬಾವಿಗಾಗಿ ಸಂಬಂಧಿಕರಿಂದ ತನ್ನ ಸ್ವಂತ ಮಗ ಹಾಗೂ ತಮ್ಮನನ್ನ ತಮ್ಮನ ಸಂಬಂಧಿಕರೇ ಕೊಲೆ ಮಾಡಿದ್ದರು ಅಂತಾ ಹತ್ತು ಜನರ ವಿರುದ್ಧ ದೂರು ದಾಖಲಿಸಿದ್ದ ಅದರಲ್ಲಿ ಮೂವರಿಗೆ ಜಾಮೀನಾಗಿತ್ತು ಏಳು ಜನ ನ್ಯಾಯಾಂಗ ಬಂಧನದಲ್ಲಿದ್ದಾರೆ.
ನಿನ್ನೆ ಸಾಂಗ್ಲಿ ಕೋರ್ಟ್ ನಲ್ಲಿ ಕೊಲೆ ವಿಚಾರವಾಗಿ ಸಾಕ್ಷಿ ಹೇಳಲು ಹೊರಟಿದ್ದ ದಾದಾಸೋ ಇಮಗರನನ್ನ ನಾಗಜ್ ಕ್ರಾಸ್ ಬಳಿ ಯಾರೋ ಅಪರಿಚಿತರು ಇತನನ್ನ ಅಪಹರಿಸಿದ್ದಾರೆ. ಈ ಸಂಬಂಧ ನಿನ್ನೆ ಬೆಳಿಗ್ಗೆ ಜತ್ತ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು.
ಇವತ್ತು ಬೆಳಗ್ಗೆ ಬೆಳಗಾವಿಯ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯ ಹಣಮಾಪುರ ಹೊರವಲಯದ ಜಂಬಗಿ ರಸ್ತೆ ಪಕ್ಕದ ಮರಕ್ಕೆ ಶವವಾಗಿ ಪತ್ತೆಯಾಗಿದ್ದಾನೆ. ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದು.
ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವ್ಯಕ್ತಿಯ ಕೈ ಹಾಗೂ ಬೆರಳುಗಳಿಗೆ ಗಾಯದ ಗುರುತು ಪತ್ತೆಯಾಗಿವೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.
