ಉ.ಕ ಸುದ್ದಿಜಾಲ ಚಿಕ್ಕೋಡಿ :
32 ವರ್ಷದ ಯುವಕನಿಗೆ ಲೀವರ ಕಸಿ ಮಾಡಲು ಹಣಕಾಸಿನ ನೆರವು ಅಗತ್ಯವಾಗಿದೆ. ಕರೋಶಿ ಯುವಕನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಮನವಿ ನಾಡಿದ ಬಡ ಕುಟುಂಬ.
ಮನೆಯಲ್ಲಿ ಬಡತನದ ಪರಿಸ್ಥಿತಿ, ಯಾವುದೇ ಹೊಲ ಇಲ್ಲ, ಹೆಂಡತಿ, ಇಬ್ಬರು ಸಣ್ಣ ಮಕ್ಕಳು, ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ದುಡಿಯುವ ವ್ಯಕ್ತಿಗೆ ಲಿವರ ಸಿರೋಸೀಸನ ಕಾಯಿಲೆ ಎದುರಾಗಿದೆ. ಈಗ ಲೀವರ ಕಸಿ ಮಾಡುವ ಅವಶ್ಯಕತೆ ಇದೆ ಇದಕ್ಕಾಗಿ 22 ಲಕ್ಷ ರೂಪಾಯಿಗಳ ಖರ್ಚು ಬರಲಿದೆ.
ಕೈಯಲ್ಲಿ ಕಾಸು ಇಲ್ಲ , ಏನು ಮಾಡುವುದು ಎಂಬ ಸ್ಥಿತಿ ಬಾಜಿರಾವ ಸುಳಕುಡೆ ಅವರ ಕುಟುಂಬದಮೇಲೆ ಬಂದಿದೆ. ಚಿಕ್ಕೋಡಿ ತಾಲೂಕಿನ ಕರೋಶಿಯ 32 ವರ್ಷದ ಯುವಕ ಬಾಜಿರಾವ್ ಸೂಳಕುಡೆ ಅವರ ಲಿವರ್ ವೈಫಲ್ಯವಾಗಿದೆ. ಅವರು ಪಾನ್ ಶಾಪ್ ಅಂಗಡಿ ನಡೆಸುತ್ತಿದ್ದು, ಪತ್ನಿ, ತಾಯಿ ಹಾಗೂ ಇಬ್ಬರು ಮಕ್ಕಳಿರುವ ಕುಟುಂಬವಿದೆ.
ಅಣ್ಣ ಪತ್ರಕರರ್ತ, ಕೃಷಿ ಭೂಮಿ ಇಲ್ಲ. ಕೈಮೇಲೆ ಹೊಟ್ಟೆ. ಬಾಜಿರಾವ್ ಸುಳಕುಡೆ ಅವರು ಕಳೆದ ಎರಡು ವರ್ಷಗಳಿಂದ ಲಿವರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಸಹೋದರ ಪತ್ರಕರ್ತ ಕೆ ಎಸ್ ಸುಳಕೂಡೆ. ಬಾಜಿರಾವಗೆ ಸದ್ಯ ಚಿಕ್ಕೋಡಿ, ನಿಪಾಣಿ ಮತ್ತು ಬೆಳಗಾವಿಯ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ತಾತ್ಕಾಲಿಕವಾಗಿ ಗುಣವಾಗುತ್ತದೆ. ಆದರೆ ಮತ್ತೆ ಆರೋಗ್ಯ ಹದಗೆಡುತ್ತದೆ. ಬಾಜಿರಾವನ ಚಿಕಿತ್ಸೆಗೆ ಇಲ್ಲಿಯವರೆಗೆ ಎಂಟು ಲಕ್ಷದವರೆಗೆ ಖರ್ಚಾಗಿದೆ. ಸದ್ಯ ಬೆಳಗಾವಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಜಿರಾವ್ ಸುಳಕುಡೆ ಅವರ ಲಿವರ್ ವಿಫಲವಾಗಿದ್ದು, ಲಿವರ್ ಕಸಿ ಮಾಡಬೇಕಾಗಿದೆ ಎಂದು ಅಲ್ಲಿನ ಹಿರಿಯ ವೈದ್ಯರು ಹೇಳಿದ್ದಾರೆ.
ಇದಕ್ಕೆ ಸುಮಾರು 22 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಆದರೆ ಕುಟುಂಬದಕಡೆ ಇದ ಹಣವೂ ಖರ್ಚಾಗಿದ್ದು, ಈಗ ಲಿವರ್ ಕಸಿ ಹಾಗೂ ಇತರೆ ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲದಂತಾಗಿದೆ. ಬಾಜಿರಾವ್ ಸೂಳಕೂಡೆ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಆದಷ್ಟು ಬೇಗ ಲಿವರ್ ಕಸಿ ಮಾಡಬೇಕಾಗಿದೆ.
ಸದ್ಯ ಬಾಜಿರಾವಗೆ ಜನಪ್ರತಿನಿಧಿಗಳು, ರಾಜಕೀಯ ವ್ಯಕ್ತಿಗಳು, ಸಂಘ ಸಂಸ್ಥೆಗಳು, ದಾನಿಗಳು, ನಾಗರಿಕರಿಂದ ಆರ್ಥಿಕ ನೆರವು ಅಗತ್ಯವಾಗಿದೆ. ದಾನ ಮಾಡ ಬಯಸುವರು ಈ ಕೆಳಗಿನ ಖಾತೆಗೆ ಮಾಡಲು ವಿನಂತಿಸಿದ್ದಾರೆ.
ಫೆಡರಲ್ ಬ್ಯಾಂಕ್ ಖಾತೆ ಸಂಖ್ಯೆ : 19390100033095
IFSC ಕೋಡ್: FDRL0001939
ಅಥವಾ 9632731806 ಗೆ ಹಣ ಕಳುಹಿಸಿ ಎಂದು ಕೋರಿಲಾಗಿದೆ.