ಉ.ಕ ಸುದ್ದಿಜಾಲ ಚಿಕ್ಕೋಡಿ :

ಮಹಾರಾಷ್ಟ್ರದ ಗಡಿ ಭಾಗದಲ್ಲಿ ಬರುವಂತ ಕಾಗವಾಡ ತಾಲೂಕಿನ ಉಗಾರ ಹಾಗೂ ಚಿಕ್ಕೋಡಿ ರೋಡ ರೈಲು ನಿಲ್ದಾಣದಲ್ಲಿ ವೇಗದೂತ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲ್ಲಿಸುವಂತೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸೂಚಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಉಗಾರ ಖುರ್ದ ಸುತ್ತಮುತ್ತಲ್ಲಿನ ಜನರಿಗೆ ಸಂಪರ್ಕ ಹೊಂದಲು ಬಹಳ ತೊಂದರೆಯಾಗುತ್ತಿದ್ದು ಇದ್ದನ್ನ ಮನಗಡು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ರೋಡ್ ರೈಲ್ವೆ ನಿಲ್ದಾನದಲ್ಲಿ ನಿಲ್ಲಿಸಲು ಸೂಚಿಸಿದ್ದಾರೆ.

ವೇಗದೂತ ಪ್ರಮುಖ ರೈಲುಗಳಾದ ಹುಬ್ಬಳ್ಳಿ – ದಾದರ ಎಕ್ಸಪ್ರೆಸ್ (ನಂ. 17317/18) ಹಾಗೂ ತಿರುಚಿರಾಪಲ್ಲ – ಶ್ರೀಗಂಗಾನಗರ ಎಕ್ಸಪ್ರೆಸ್‌ (ನಂ. 22497/98) ಮತ್ತು ಕಾಗವಾಡ ತಾಲೂಕಿನ ಉಗಾರಖುರ್ದ ರೈಲ್ವೆ ನಿಲ್ದಾನದಲ್ಲಿ ವೇಗದೂತ ಪ್ರಮುಖ ರೈಲುಗಳಾದ ತಿರುಪತಿ- ಕೊಲ್ಲಾಪೂರ ಎಕ್ಸ್‌ಪ್ರೆಸ್‌ (ನಂ. 17415/16) ನಿಲ್ದಾಣಗಳಲ್ಲಿ ನಿಲುಗಡೆಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಎಕ್ಸ್‌ಪ್ರೆಸ್‌ ರೈಲುಗಳನ್ನು ನೀಲುಗಡೆ ಮಾಡಲು ಸೂಚಿಸಿದ್ದರು.

ಸೂಚನೆಯ ಮೇರೆಗೆ ಅಧಿಕಾರಿಗಳು ಚಿಕ್ಕೋಡಿ ರೋಡ್ ರೈಲ್ವೆ ನಿಲ್ದಾನದಲ್ಲಿ ವೇಗದೂತ ರೈಲುಗಳಾದ ಹುಬ್ಬಳ್ಳಿ-ದಾದರ ಎಕ್ಸಪ್ರೆಸ್ (ನಂ. 17317/18) ಮಾ.5 ರಿಂದ ಹಾಗೂ ತಿರುಚಿರಾಪಲ್ಲ – ಶ್ರೀಗಂಗಾನಗರ ಎಕ್ಸಪ್ರೆಸ್‌ (ನಂ. 22497/98) ಮಾ.8 ಹಾಗೂ ಮಾ.4 ರಿಂದ ಮತ್ತು ಉಗಾರಖುರ್ದ ರೈಲ್ವೆ ನಿಲ್ದಾನದಲ್ಲಿ ವೇಗದೂತ ರೈಲುಗಳಾದ ತಿರುಪತಿ – ಕೊಲ್ಲಾಪೂರ ಎಕ್ಸ್‌ಪ್ರೆಸ್‌ (ನಂ. 17415/16) ಮಾ.5 ರಿಂದ ವೇಗದೂತ ರೈಲುಗಳನ್ನು ನಿಲುಗಡೆ ಮಾಡಲು ಆದೇಶ ಹೊರಡಿಸಿದ್ದಾರೆ.

ಇದರಿಂದ ಈ ಭಾಗದ ಜನರಿಗೆ ತಿರುಪತಿ ದರ್ಶನಕ್ಕೆ ಹಾಗೂ ಬೆಳಗಾವಿ ಹೋಗಲು ಹಾಗೂ ಸಂಪರ್ಕ ಹೊಂದಲು ಬಹಳ ಅನುಕೂಲವಾಗಲಿದೆ ಮತ್ತು ಇದರ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.