ಬಳ್ಳಾರಿ :
ಬಳ್ಳಾರಿ ಜಿಲ್ಲೆಯ ಕೊಟ್ಟೂರು ಸಂಸ್ಥಾನಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಅನಾರೋಗ್ಯದಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.
ಶ್ರೀಗಳ ಪಾರ್ಥಿವ ಶರೀರ ಬೆಂಗಳೂರಿನಿಂದ ಹೊಸಪೇಟೆಗೆ ಬರುವ ಸಾಧ್ಯತೆ. ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ. ಶ್ರೀಗಳ ಪಾರ್ಥಿವ ಶರೀರ ಮಧ್ಯಾಹ್ನದ ಬಳಿಕ ಹೊಸಪೇಟೆಗೆ ಆಗಮಿಸುವ ಸಾಧ್ಯತೆ. ಭಕ್ತರಿಗೆ ಅಂತಿಮ ದರ್ಶನದ ಬಳಿಕ ಗದಗನ ಹಾಲಕೆರೆಗೆ ತೆರಳುವ ಸಾಧ್ಯತೆ.
ಹಂಪಿಯ ಹೇಮಕೂಟ, ಬಳ್ಳಾರಿ , ಹಾಲಕೆರೆ, ಬಾದಾಮಿ ಶಿವಯೋಗ ಮಂದಿರ ಸೇರಿದಂತೆ ಹಲವು ಮಠಗಳಿಗೆ ಪೀಠಾಧ್ಯಕ್ಷರಾಗಿದ್ದ ಸಂಗನಬಸವ ಸ್ವಾಮೀಜಿ.