ಉ.ಕ ಸುದ್ದಿಜಾಲ ಅಥಣಿ :
ನೂತನವಾಗಿ ಆಯ್ಕೆಯಾದ ಶಂಕರ ಗಡೆದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯತಿ ಭರಮಖೋಡಿ ಗ್ರಾಮದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮಾಜಿ ಅದ್ಯಕ್ಷ ಸಂತೋಷ ಕಕಮರಿ ಆರೋಪಿಸಿದ್ದಾರೆ.
ಸಂಕೋನಟ್ಟಿ ಪಂಚಾಯತಿ ಅಧ್ಯಕ್ಷ ಚುನಾವಣೆ ನಿಯಮ ಉಲ್ಲಂಘನೆ : ಮಾಜಿ ಅದ್ಯಕ್ಷ ಸಂತೋಷ ಕಕಮರಿ ಆರೋಪ
ಚುನಾವಣೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಆಯೋಗದ ನಿಯಮಾವಳಿಗಳ ಪ್ರಕಾರ ಒಂದು ಲಾಭದಾಯಕ ಹುದ್ದೆಯಲ್ಲಿರುವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ವಿರುವುದಿಲ್ಲಾ ಎಂದು ಇದೆ ಆದರೆ ಇದು ಚುನಾವಣೆ ಆಯೋಗ ನಿಯಮ ಉಲ್ಲಂಘನೆ ಯಾಗಿದೆ ಎಂದು ಹೇಳಿದರು .
ಚುನಾವಣೆ ಪ್ರಕ್ರಿಯೆಯಲ್ಲಿ ನಾನು ಈ ವಿಚಾರಕ್ಕೆ ಸಂಭಂಧಿಸಿದಂತೆ ಅವರ ನಾಮಪತ್ರ ತಿರಸ್ಕರಿಸಬೇಕೆಂದು ಚುನಾವಣೆ ಅಧಿಕಾರಿಗೆ ಸಂರ್ಪೂಣ ದಾಖಲಾತಿ ಮೂಲಕ ಅರ್ಜಿ ಸಲ್ಲಿಸದಾಗಿಯು ಅವರ ಯಾವುದೆ ಕ್ರಮ ಕೈಗೊಳ್ಳದೆ ಇರುವದರಿಂದ ಇದರ ಹಿಂದೆ ಸ್ಥಳೀಯ ಶಾಸಕರ ಒತ್ತಡದ ಮದ್ಯ ಕೆಲಸ ಮಾಡಿದ್ದಾರೆ ಎನ್ನವ ಸಂಶಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು .
ಶುಕ್ರವಾರ ನಡೆದ ಚುನಾವಣೆಯ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ , ಕಾನೂನಿನ ಮೂಲಕ ಜಯಗೊಳಿಸುವ ವಿಶ್ವಸವಿದೆ. ನನ್ನ ವಿರುದ್ದ ಗ್ರಾಮ ಪಂಚಾಯತಿ ಸದಸ್ಯರಿಗೆ ಶಾಸಕರು ಒತ್ತಡ ಹೇರುವ ಮೂಲಕ ಅವಿಶ್ವಾಸ ಮಾಡಿದರು , ನಾನು 16 ತಿಂಗಳುಗಳ ಕಾಲ ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತ ನೀಡಿದ ಸಂತೃಪ್ತಿ ನನಗೆ ಇದೆ ಎಂದು ಹೇಳಿದರು.
ಈ ಬಗ್ಗೆ ಚುನಾವಣಾ ಅದಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಾಲೂಕಾ ಪಂಚಾಯತ ಅದಿಕಾರಿ ಶಿವಾನಂದ ಕಲ್ಲಾಪುರ ಮಾತನಾಡಿ ಇದು ಅದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಾಗಿದೆ. ಇಲ್ಲಿ ಸದಸ್ಯತ್ವ ಅನರ್ಹಗೋಳಿಸುವ ಹಕ್ಕು ನಮಗೆ ಇರುವದಿಲ್ಲಾ ಈ ನಾಲ್ಕು ವರ್ಷಗಳ ಕಾಲ ಅವರು ಸದಸ್ಯರಾಗಿ ಇದ್ದಾರೆ. ಈ ವಿಷಯದ ಬಗ್ಗೆ ಮೇಲಾದಿಕಾರಿಗಳ ಬಗ್ಗೆ ಮಾತನಾಡಿ ಮುಂದಿನ ನಿರ್ದಾರ ಕೈಗೋಳ್ಳಲಾಗವದು ಎಂದು ಹೇಳಿದರು.