ಉ.ಕ ಸುದ್ದಿಜಾಲ ಕಾಗವಾಡ :

ಕಷ್ಟದ ಬದುಕಿಗೆ ನೀರೆ ಆಸರೆ, ಗಡಿ ಭಾಗದ ರೈತರ ಫಲವತ್ತಾದ ಸಾವಿರಾರು ಹೆಕ್ಟ್ರ್ ರ್ ಭೂಮಿಗೆ ನೀರಿಲ್ಲದೆ ಗಡಿ ರೈತರ ಬದುಕು ಕಷ್ಟಕರವಾಗಿದೆ.

ನಾವು ಸಣ್ಣವರಿದ್ದಾಗಿನಿಂದ ಈ ಯೋಜನೆಯ ದಾರಿ ಕಾಯುತ್ತಿದ್ದೇವೆ ಆದ್ರೆ ಈಗ ವಯಸ್ಸು 85 ಇನ್ನೇನು ಬಿದ್ದು ಹೋಗುವ ಮರ ನಾವು ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ನೀರು ಅನಿವಾರ್ಯ ಸಾಯೋ ಮುಂಚೆ ಒಮ್ಮೆ ಈ ಕಣ್ಣಿಂದ ನೀರು ನೋಡುವ ಆಶೆ ನಮ್ಮದು ದಯವಿಟ್ಟು ಕಾಲುವೆಗೆ ನೀರು ಬೀಡಿ ಎಂದು ವೃದ್ಧ ಕಣ್ಣೀರು ಹಾಕುತ್ತಲೆ ಕೈ ಮುಗಿದು ಬೇಡಿಕೊಂಡಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದ ರೈತ ಬಸಪ್ಪ ಗೌರಗೊಂಡ (85) ಬಸವೇಶ್ವರ ಎತ ನೀರಾವರಿ ಯೋಜನೆ ತನ್ನ ಜೀವಿತಾವಧಿಯಲ್ಲಿ ನೋಡುವ ಆಶೆ ನಮಗಿದೆ ದಯವಿಟ್ಟು ನಮ್ಮ ಆಸೆ ಪೂರೈಸಿ ಎಂಬ ಮಾತು ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ.

ಜನಪ್ರತಿನಿದಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದ ಜನರು ರೋಸಿ ಹೋಗಿದ್ದು ರೈತರ ಕಷ್ಟ ಯಾರಿಗೂ ತಿಳಿಯದಂತಾಗಿದೆ. ದಿನಂಪ್ರತಿ ಟೊಳ್ಳು ಭರವಸೆ ಮಾತಿನಿಂದ ರೈತರ ಆಶಾ ಗೋಪುರ ಕಳಚಿದಂತಾಗಿದ್ದು ಆದಷ್ಟು ಬೇಗ ನೀರು ಪೂರೈಕೆಯಾಗಲಿ ಎಂಬ ಹಂಬಲ ಎಲ್ಲರದ್ದಾಗಿದೆ.