ಉತ್ತರ ಕರ್ನಾಟಕ ಸುದ್ದಿಜಾಲ ರಾಯಬಾಗ :
ಕರ್ನಾಟಕದಲ್ಲಿ ಎಂಇಎಸ್ ಬ್ಯಾನ್ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ವಿನೂತನ ಪ್ರತಿಭಟನೆ ಮಾಡಿದ ಜಯ ಕರ್ನಾಟಕ ಸಂಘಟನೆ.
ರಾಯಭಾಗ ಪಟ್ಟಣ ಪ್ರಮುಖ ಬೀದಿಗಳಲ್ಲಿ ಶವ ಯಾತ್ರೆ ಮಾಡಿದ ಜಯ ಕರ್ನಾಟಕ ಸಂಘಟನೆ ಎಂಇಎಸ್ ಮುಖಂಡ ಶುಭಂ ಶಳಕೆ ಶವಯಾತ್ರೆ ಮಾಡಿದ ಕನ್ನಡಪರ ಸಂಘಟನೆಗಳು, ಕರ್ನಾಟಕದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದರು. ಯಮಧರ್ಮರಾಯನ ವೇಷ ಧರಿಸಿ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ರಾಯಬಾಗದ ಪ್ರಮುಖ ಬೀದಿಗಳಲ್ಲಿ ಎಂಇಎಸ್ ಮುಖಂಡ ಶುಭಂ ಶಳಕೆ ಶವಯಾತ್ರೆ ಜೊತೆಗೆ ಶಳಕೆ ಪ್ರತಿಕೃತಿಯನ್ನ ಎಳೆದು ಚಪ್ಪಲಿ ಸೇವೆ ಮಾಡಿ ಆತನ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ ರಾಯಬಾಗ ಜಯ ಕರ್ನಾಟಕ ಸಂಘಟನೆ ನೂರಾರು ಕಾರ್ಯಕರ್ತರು.