ಉತ್ತರ ಕರ್ನಾಟಕ ಸುದ್ದಿಜಾಲ ಕೊಪ್ಪಳ :
ಕೊಪ್ಪಳ ತಾಲೂಕಿನ ಆನೆಗೊಂದಿ (ಚಿಕ್ಕರಾಂಪುರ)ಗ್ರಾಮದ ಬಳಿ ಇರುವ ಅಂಜನಾದ್ರಿ ಬೆಟ್ಟದಲ್ಲಿ ಗಂಗಾವತಿ ಪ್ರಭಾರಿ ತಹಶೀಲ್ದಾರ್ ವಿ ಹೆಚ್ ಹೂರಪೇಟೆ ಅವರ ನೇತೃತ್ವದಲ್ಲಿ ಹುಂಡಿ ತೆರೆಯಲಾಯಿತು.
ಹುಂಡಿಯಲ್ಲಿ ಬರೋಬ್ಬರಿ ಒಟ್ಟು 17,98,935 ರೂ ಹಣ ಸಂಗ್ರಹವಾಗಿದ್ದು, 5 ವಿದೇಶಿ ನಾಣ್ಯಗಳು ಸಹ ಕಾಣಿಕೆಯಾಗಿ ಬಂದಿವೆ. ಏಣಿಕೆಯನ್ನು ಸಂಪೂರ್ಣವಾಗಿ ಪೊಲೀಸ್ ಬಂದೋಬಸ್ತ್ ಹಾಗೂ ಸಿ.ಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಸಲಾಯಿತು.

ಇನ್ನು ಕಳೆದ ನವೆಂಬರ್ 30 ರಂದು ಹುಂಡಿ ತೆರಯಲಾಗಿತ್ತು,
ಕಳೆದ ಬಾರಿ 23,48,065 ರೂ ಹಣ ಸಂಗ್ರಹವಾಗಿತ್ತು. ಇದೀಗ ಒಂದು ತಿಂಗಳ ನಂತರ ಮತ್ತೆ ಹುಂಡಿ ತೆರೆಯಲಾಗಿದ್ದು, ಬರೋಬ್ಬರಿ 17,98,935 ರೂ, ಹಣ ಸಂಗ್ರಹವಾಗಿದೆ.