ಉತ್ತರ ಕರ್ನಾಟಕ ಸುದ್ದಿಜಾಲ ಬೆಳಗಾವಿ :

ಹೊಸ ವರ್ಷಾಚರಣೆಗೆ ಪಕ್ಕದ ರಾಜ್ಯ ಗೋವಾಗೆ ತೆರಳಿ ವಾಪಸ್ ಆಗುತ್ತಿರುವ ರಾಜ್ಯದ ಜನ. ಗಡಿ ಜಿಲ್ಲೆ ಬೆಳಗಾವಿಯಿಂದ ಅತಿ ಹೆಚ್ಚು ಜನ ಗೋವಾಗೆ ತೆರಳಿದ್ದಾರೆ. ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಹಿನ್ನಲೆ ನಿನ್ನೆ ಪಕ್ಕದ ಗೋವಾಗೆ ತೆರಳಿರುವ ಸಾವಿರಾರು ಜನ. ಕಳೆದ ರಾತ್ರಿ ಮೊಜು ಮಸ್ತಿ ಮಾಡಿ ಇಂದು ಮತ್ತೆ ವಾಪಸ್ ಗಡಿ ಜನರಲ್ಲಿ ಮತ್ತೆ ಆತಂಕ ಹೊಸ ವರ್ಷಾಚರಣೆಗೆ ತೆರಳಿದ್ದವರಿಂದ ಒಮೈಕ್ರಾನ್ ಹರಡುವ ಭೀತಿ.

ವಾಪಸ್ ಬರುವವರನ್ನ ಕಡ್ಡಾಯ ಕೋವಿಡ್ ಟೆಸ್ಟ್ ಗೆ ಒಳ ಪಡಿಸುವಂತೆ ಸಾರ್ವಜನಿಕರ ಒತ್ತಾಯ. ಕೋವಿಡ್ ತಪಾಸಣೆ ನಡೆಸಿ ಕಡ್ಡಾಯ ಕ್ವಾರಂಟೈನ ಸೂಚನೆ ನೀಡಬೇಕೆಂದು ಒತ್ತಾಯ. ದೇಶದ ನಾನಾ ರಾಜ್ಯದ ಜನ ಗೋವಾ ಬರುತ್ತಾರೆ. ಅಲ್ಲಿ ಕೋರೊನಾ ಹಾಗೂ ಒಮೈಕ್ರಾನ್ ಸೊಂಕು ಹರಡುವ ಭೀತಿ ಹೆಚ್ಚಾಗಿದೆ. ಹಾಗಾಗಿ ಗೋವಾದಿಂದ ಬರುವವನ್ನ ಕಡ್ಡಾಯವಾಗಿ ಕೋವಿಡ್ ತಪಾಸಣೆ ಹಾಗೂ ಕ್ವಾರಂಟೈನ್ ಮಾಡಬೇಕೆಂದು ಒತ್ತಾಯಿಸುತ್ತಿರುವ ಸಾರ್ವಜನಿಕರು.