ಉ.ಕ ಸುದ್ದಿಜಾಲ ಬಾಗಲಕೋಟೆ :

ಕಾಂತಾರ ಚಿತ್ರದ ಬಗ್ಗೆ ನಟ ಚೇತನ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಬನಹಟ್ಟಿಯಲ್ಲಿ ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ‌ ಬನಹಟ್ಟಿಯಲ್ಲಿ ಹೇಳಿಕೆ ನೀಡಿದ್ದಾರೆ. ಚೇತನ‌ ಅವರದ್ದು ಪ್ರೊಪಶನಲ್ ಜಲಸಿ. ಅವರಿಗೆ ಫಿಲ್ಮ್ ಹಿಟ್ ಮಾಡಿ ನಟನಾಗಿ ಉಳಿಯುವ ಯಾವ ಸಾಮರ್ಥ್ಯವೂ ಇಲ್ಲ.

ಕಳೆದ ಕೆಲವು ತಿಂಗಳದ ಅವರು ಒಂದಲ್ಲ ವಿಚಾರ ತೆಗೆದು ಹಿಂದೂ ಧರ್ಮವನ್ನ ಟಾರ್ಗೆಟ್ ಮಾಡ್ತಿದ್ದಾರೆ. ತಾವು ಸುದ್ದಿಯಲ್ಲಿ ಇರಲು ಪ್ರಯತ್ನ ಮಾಡ್ತಿದ್ದಾರೆ. ಈಗ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದ ಬಗ್ಗೆ ಹೀಗಳೆಯುವ ಪ್ರಯತ್ನ ಮಾಡ್ತಿದ್ದಾರೆ.

ಭಾರತೀಯ ಸಂಸ್ಕೃತಿ ಬೇರೆ, ಮೂಲ ಭಾರತಿಯ ಸಂಸ್ಕೃತಿ ಬೇರೆ. ಇದು ಎಡಪಂಥಿಯರ ಕಾಮನ್ ಅಜಂಡಾ. ಅವರದು ಎಂಥ ಮೂರ್ಖತನದ ವಾದವೆಂದರೆ. ಜಗತ್ತು ಅದನ್ನು ತೀರಸ್ಕರಿಸಿಯಾಗಿದೆ.

ನಟ ಚೇತನಗೆ ತಿರುಗೇಟು ನೀಡಿದ ಚಕ್ರವರ್ತಿ ಸೂಲಿಬೆಲೆ

ಆದರೂ ಇವತ್ತಿಗೂ ಅದನ್ನು ಹಿಡಿದು ನೇತಾಡ್ತಿದ್ದಾರೆ ಯಾಕೆಂದ್ರೆ. ಇದನ್ನು ಬಿಟ್ಟು ಬಿಟ್ರೆ ಇಷ್ಟು ದಿನದ ಹೋರಾಟದ ಫೇಸ್ ಹೋಗಿ ಬಿಡುತ್ತೆ ಅಂತ. ಹಿಂದೂ ಧರ್ಮ ಎಲ್ಲವನ್ನು ಒಳಗೊಳ್ಳುವ ಧರ್ಮ ಸ್ವಾಮಿ ವಿವೇಕಾನಂದರು ಚಿಕ್ಯಾಗೋ ಸಮ್ಮೇಳನದಲ್ಲಿ ಹೇಳಿದ್ದಾರೆ.

ನಾವು ಎಲ್ಲವನ್ನು ಒಳಗೊಳ್ಳುವುದಾಗಿರುವುದರಿಂದ. ಅದು ಬುಡಕಟ್ಟು ಆಗಿರಲಿ, ಯಾವುದೇ ಸಂಸ್ಕೃತಿ ಆಗಿದ್ದರೂ. ಅದು ಹಿಂದೂ ಸಂಸ್ಕೃತಿಯ ಅಂಗವೆ…

ಕಾಂತಾರ ಸಿನಿಮಾದಲ್ಲಿ ಏನು ನೋಡ್ತೇವೆ. ದೇವ ಪೂಜೆ ಮತ್ತು ದೈವ ಪೂಜೆ ಎರಡು ಡಿಪರಂಟ್ ಆಗಿರುವಂತದ್ದು.‌ ದೇವರಿಗಿಂತ ದೈವಕ್ಕೆ ಹೆಚ್ಚು ಬೆಲೆ ಅಂತ ಅಲ್ಲಿ ಹೇಳ್ತಾರೆ. ದೈವವೂ ಕೂಡ ಹಿಂದೆ ವ್ಯಕ್ತಿಯಾಗಿದ್ದು ಸಮಾಜಕ್ಕೊಸ್ಕರ ತನನ್ನನ್ನು ಸಮರ್ಪಣೆ ಆಗಿರೋದನ್ನ ಅವರು ತುಂಬಾ ಗೌರವಿಸ್ತಾರೆ. ಆ ಗೌರವ ದೇವರಿಗಿಂತ ಹೆಚ್ಚು.

ಆಗಂತ ಅವರು ದೇವರನ್ನ ಪೂಜಿಸಲ್ಲ ಅಂತಲ್ಲ. ದೈವ ಪೂಜೆ ಮತ್ತು ದೇವ ಪೂಜೆ ಎರಡು ಜೊತೆಯಾಗಿ ಹೋಗುವಂತ. ವಿಶೇಷ ಗೌರವ, ಸಂಪ್ರದಾಯವನ್ನ ದಕ್ಷಿಣ ಕರ್ನಾಟಕದಲ್ಲಿ ಬೆಳೆಸಿಕೊಂಡು ಬಂದಿದ್ದಾರೆ…

ದುರಾದೃಷ್ಟ ಅಂದ್ರೆ ಚೇತನ್ ಗೆ ಇಷ್ಟೆಲ್ಲ ಅಧ್ಯಯನ ಮಾಡುವ ಪುರಸತ್ತು ಇಲ್ಲ. ಚೇತನ್ ಗೆ ನಾನು ವಿನಂತಿ ಮಾಡ್ತೇನೆ. ದಯಮಾಡಿ ಒಂದು ಸಲ ದಕ್ಷಿಣ ಕರ್ನಾಟಕ ಸುತ್ತಾಡಿಕೊಂಡು ಬನ್ನಿ. ಅಲ್ಲಿನ‌ ಜನರ ಜೊತೆ ಸಂಭಾಷಣೆ ನಡೆಸಿ…

ಅಲ್ಲಿನ ಜನರ ಸಂಸ್ಕೃತಿ ಎಷ್ಟು ಆಳವಾಗಿದೆ ಅಂದ್ರೆ ಅದು ಸನಾತನ ಧರ್ಮದ ಒಂದು ಭಾಗವೆ. ಅದರ ಜೊತೆ ಜೊತೆಗೆ ಹೋಗುತ್ತೆ ಅನ್ನೋದನ್ನ ನೋಡಿದ್ರೆ ಅವರಿಗೆ ಅರ್ಥ ಆಗುತ್ತೆ. ಚೇತನ್ ಈ ತರಹದ ಮೂರ್ಖವಾದ ಬಿಟ್ಟು ಭಾರತಿಯ ಸಂಸ್ಕೃತಿ,

ಜನರೊಂದಿಗೆ ಒಂದಾಗಬೇಕು ಅಂತ ಚೇತನಗೆ ಕೇಳ್ಕೊಂತೇನೆ. ಚೇತನ್ ಭಾರತಿಯ ಸಂಸ್ಕೃತಿಯ ಬಗ್ಗೆ ಮಾತನಾಡುವ ಮುಂಚೆ. ಮೊದಲು ಎರಡೆರೆಡು ಸಿಟಿಜನ್ ಶಿಪ್ ಇರುವುದನ್ನು ಬಿಟ್ಟು. ಪಕ್ಕಾ ಭಾರತೀಯರಾಗಿರುವುದನ್ನು ಕಲಿಯಿರಿ ಎಂದು ಹೇಳಿದರು.