ಉ.ಕ ಸುದ್ದಿಜಾಲ ಅಥಣಿ :
ಮೂಡ ಹಗರಣ ಸಂಬಂಧಿಸಿದಂತೆ ಸಿಎಂ ವಿರುದ್ಧ ಹಲವು ದೋಷಾರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ವಿಚಾರ ರಾಜ್ಯದಲ್ಲಿ ಸದ್ದು ಮಾಡುತ್ತಿದೆ.
ಅದರಂತೆ ಸಿಎಂ ಕುರ್ಚಿ ಖಾಲಿ ಯಾಗೋಕು ಮೊದಲೆ ಕಾಂಗ್ರೆಸ್ ನಾಯಕರ ಕಣ್ಣು ಕುರ್ಚಿ ಮೇಲೆ ಬಿದ್ದಿದೆ. ಸಿಎಂ ಕುರ್ಚಿ ಖಾಲಿ ಇಲ್ಲ ಅನ್ನುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬಿಸಿದ ರಾಜು ಕಾಗೆ ಇನ್ನು ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ನವರೇ ಮುಂದುವರೆಯುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಮುಂಜೂರಾದ ವಸತಿ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪ್ರತಿ ಹಂಚಿಕೆ ಬಳಿಕ ಪ್ರತಿಕ್ರಿಯೆ ನೀಡಿದ ಶಾಸಕ ರಾಜು ಕಾಗೆ ಸಿಎಂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ ಅವರು ಯಾವುದೆ ತಪ್ಪು ಮಾಡಿಲ್ಲ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತಿದೆ. ಹಾಗೂ ಗಡಿ ಜನರ ಬಹು ನಿರೀಕ್ಷಿತ ಯೋಜನೆಯಾದ ಬಸವೇಶ್ವರ ಏತ ನೀರಾವರಿ ಶೀಘ್ರವೆ ಕಾಲುವೆಗೆ ನೀರು ಪೂರೈಸಲಾಗುತ್ತದೆ ಎಂದು ಭರವಸೆ ನೀಡಿದರು.
ನನಗು ಸಿಎಂ ಆಗೋ ಅಸೆ ಆದ್ರೆ ಸುಲಭ ಅಲ್ಲ, ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ತಿವಿದ್ರಾ..? ಕಾಗೆ
ನನಗು ಸಿಎಂ ಆಗಬೇಕು ಅಂತಾ ಆಶೆ ಆದರೆ ಅದು ಸಾಧ್ಯನಾ ” ಅನ್ನೋ ಮಾತಿನ ಮೂಲಕ ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು.
ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ನಿಮಿತ್ತ ಆಗಮಿಸಿದ ಅವರು ಸಿಎಂ ಬದಲಾವಣೆ ವಿಚಾರವಾಗಿ ಮಾತಾನಾಡುತ್ತ. ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಮೈಗಂಟಿಸಿಕೊಂಡವರಲ್ಲ.
ಯಾರ್ಯಾರೋ ಸಿಎಂ ಆಗ್ತೀನಿ ಅಂತಾ ಅಂದ್ರೆ ಅದು ಸಾಧ್ಯನಾ ನನಗು ಸಿಎಂ ಆಗೋ ಅಸೆ ಆದ್ರೆ ಅದು ಸುಮ್ನೆ ಅಲ್ಲ ಎಂಬ ಮಾತಿನ ಮೂಲಕ ಸಿಎಂ ಕುರ್ಚಿಗಾಗಿ ಲಾಭಿ ನಡೆಸುತ್ತಿರುವ ಕೈ ನಾಯಕರಿಗೆ ಮೃದುವಾಗಿ ತಿವಿದ್ರಾ ಅನ್ನೋ ಮಾತು ಕೇಳಿ ಬರುತ್ತಿದೆ.