ಉ.ಕ ಸುದ್ದಿಜಾಲ ಬೆಳಗಾವಿ :
ಐನಾಪುರದಲ್ಲಿ ಗೋಮಾಂಸ ಸಾಗಾಟದ ವಾಹನಕ್ಕೆ ಬೆಂಕಿ ಪ್ರಕರಣ ಬೆಳಗಾವಿಯಲ್ಲಿ ಎಸ್ಪಿ ಭೀಮಾಶಂಕರ್ ಗುಳೇದ್ ಹೇಳಿಕೆ ನೀಡಿದ್ದಾರೆ. ನಮ್ಮ ಪೊಲೀಸರಿಗೆ 9.50ಕ್ಕೆ ಮಾಹಿತಿ ಬರುತ್ತದೆ. ಟ್ರಕ್ ನಲ್ಲಿ ಗೋ ಮಾಂಸ ಸಾಗಾಟದ ಬಗ್ಗೆ ಮಾಹಿತಿ ಬರುತ್ತದೆ. ಪಿಎಸ್ಐ ಅಲ್ಲಿಗೆ ತಲುಪಿದಾಗ ಅಲ್ಲಿ ಸುಮಾರ ಜನ ಸೇರಿದ್ರು ಕ್ರಮ ಕೈಗೊಳ್ಳುವ ಭರವಸೆ ನೀಡಿ ಟ್ರಕ್ ಡ್ರೈವರ್, ಕಿನ್ನರ್ ವಶಕ್ಕೆ ಪಡೆಯುತ್ತಾರೆ.
ಬಳಿಕ ಕಿಡಿಗೇಡಿಗಳು ಗೋಮಾಂಸ ಟ್ರಕ್ ಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಅಗ್ನಿ ಶಾಮಕ ಸಿಬ್ಬಂಧಿ ಬಂದು ಬೆಂಕಿ ನಂದಿಸಿದ್ದಾರೆ. ಕಾನೂನು ಕೈಗೆ ತೆಗೆದುಕೊಂಡು ಅಕ್ಷಮ್ಯ ಅಪರಾಧ ಎರಡು ಪ್ರತ್ಯೇಕ ಕೇಸ್ ದಾಖಲು ಮಾಡಲಾಗಿದೆ. ಚಾಲಕ, ಕಿನ್ನರ್ ಇಬ್ಬರು ಮಹಾರಾಷ್ಟ್ರದ ಮೂಲದವರು.
ಕುಡುಚಿಯ ಬೇಪಾರಿ ಎನ್ನುವರು ಗೋಮಾಂಸ ಲಾರಿಯಲ್ಲಿ ತುಂಬಿದ್ದರು. ಜಾತಿ ನಿಂಧನೆ, ಗಲಭೆ, ಸುಲಿಗೆ ಕೇಸ್ ದಾಖಲು ಮಾಡಲಾಗಿದೆ. ಗೋಮಾಂಸ ಸಾಗಾಟ ಕೇಸ್ ನಲ್ಲಿ ಮೂರು ಜನರನ್ನು ಬಂಧಿಸಿದ್ದೇವೆ. ಇನ್ನೂ ಗಲಭೆ ಸಂಬಂಧ 4 ಜನರನ್ನು ಬಂಧಿಸಿದ್ದೇವೆ.
ವಿಡಿಯೋದಲ್ಲಿ ಕಂಡು ಬಂದ ನಾಲ್ವರ ಮೇಲೆ ಕೇಸ್ ದಾಖಲು. ಯಾವುದೇ ಅಕ್ರಮ ನಡೆಯುತ್ತಿದ್ದರೇ ಪೊಲೀಸರಿಗೆ ಮಾಹಿತಿ. ನೀವೆ ಕಾನೂನು ಕೈಗೆತ್ತಿಕೊಂಡು ಬೆಂಕಿ ಹಚ್ಚುವುದು ಅಕ್ಷಮ್ಯ. ಕುಡಚಿಯಿಂದ ಕಲಬುರ್ಗಿ ಮಾರ್ಗವಾಗಿ ಹೈದರಾಬಾದ್ ಗೋಮಾಂಸ ಸಾಗಾಟ.
ಸಣ್ಣಪುಟ್ಟ ವ್ಯಾಪಾರಗಳಿಂದ ಮಾಂಸ ಸಂಗ್ರಹಿಸಿ ಸಾಗಾಟ. ಮೂಲ ವ್ಯಕ್ತಿಯ ಪತ್ತೆಯಾಗಿದ್ದು, ಶೀಘ್ರದಲ್ಲಿಯೇ ಬಂಧನ ಮಾಡ್ತಿವಿ. ಲಾರಿಯಲ್ಲಿ 3 ಟನ್ ಗೋಮಾಂಸ ಇರೋ ಬಗ್ಗೆ ಮಾಹಿತಿ ಇದೆ.
ಗೋಮಾಂಸ ತುಂಡುಗಳನ್ನು ಲ್ಯಾಬ್ ಕಳುಹಿಸಲಾಗುವುದು. ಐನಾಪುರದಲ್ಲಿ ಸದ್ಯ ಪರಿಸ್ಥಿತಿ ಹತೋಟಿಯಲ್ಲಿ ಇದೆ. ಬಂಧಿತ ನಾಲ್ವರು ಸಹ ಐನಾಪುರದ ಗ್ರಾಮದವರು ಆಗಿದ್ದಾರೆ ಎಂದು ಮಾಹಿತಿ ತಿಳಿಸಿದ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ.
ವಿಡಿಯೊ – ಐನಾಪುರದಲ್ಲಿ ಗೋಮಾಂಸ ಸಾಗಾಟದ ವಾಹನಕ್ಕೆ ಬೆಂಕಿ ಪ್ರಕರಣ ಬೆಳಗಾವಿ ಎಸ್ಪಿ ಏನಂತ್ತಾರೆ?
