ಉ.ಕ ಸುದ್ದಿಜಾಲ ಗೋಕಾಕ :

ಲಾರಿ ಮತ್ತು ಕಾರ ನಡುವೆ ಭೀಕರ ರಸ್ತೆ ಅಪಘಾತ ಮೂರು ಸಾವು, ಮೂವರಿಗೆ ಗಂಭೀರ ಗಾಯ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ನಡೆದ ಘಟನೆ.

ಪೂಣಾದಿಂದ ಸವದತ್ತಿ ಕಡೆ ಹೊರಟಿದ್ದ ಕಾರು. ಲಾರಿ ಹಾಗೂ ಕಾರಿನ ಭೀಕರ ರಸ್ತೆ ಅಪಘಾತಕ್ಕೆ ಸ್ಥಳದಲ್ಲೆ ಮೂರು ಜನರ ಸಾವು. ಓಂಕಾರ ಮಾಂಡ್ರಿ (26), ರೇಷ್ಮಾ ಶ್ರೀಕಾಂತ ಮಾಂಡ್ರಿ (32), ದೇವಾಂಶ ಶ್ರೀಕಾಂತ ಮಾಂಡ್ರಿ (4) ಸ್ಥಳದಲ್ಲೆ ಮೃತಪಟ್ಟ ದುರದೈವಿಗಳು.

ಶ್ರೀಕಾಂತ, ವಂದನಾ, ಹರ್ಷದ ಗಂಭೀರ ಗಾಯಗಳಾಗಿದ್ದು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ ಸ್ಥಳೀಯರು. ಸ್ಥಳಕ್ಕೆ ದೌಡಾಯಿಸಿದ ಪರಿಶೀಲನೆ ನಡೆಸಿದ ಪೊಲೀಸರು. ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.