ಉ.ಕ ಸುದ್ದಿಜಾಲ ಕಾಗವಾಡ (ಐನಪೂರ) :
ಆಂಧ್ರಪ್ರದೇಶದ ಹೈದರಾಬಾದಿಗೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿಗೆ ಸಾರ್ವಜನಿಕರು ಬೆಂಕಿ ಹಚ್ಚಿದ ಘಟನೆ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಬೆಳಗಾವಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದರಾಬಾದ್ ಗೆ ಲಾರಿ ತುಂಬಿಕೊಂಡು ಗೋಮಾಂಸ ಸಾಗಿಸುತ್ತಿರುವ ಮಾಹಿತಿ ಪಡೆದ ಸಾರ್ವಜನಿಕರು ಐನಾಪುರ ಗ್ರಾಮದ ಉಗಾರ ರಸ್ತೆಯ ಶ್ರೀ ಸಿದ್ದೇಶ್ವರ ಗುಡಿ ಹತ್ತಿರ ರಾತ್ರಿ 10 ಗಂಟೆ ಸುಮಾರಿಗೆ ಲಾರಿ ತಡೆ ಹಿಡಿದಿದ್ದಾರೆ.
ಚಾಲಕನನ್ನು ವಿಚಾರಿಸಿ ನಂತರ ಲಾರಿಯನ್ನು ಪರಿಶೀಲಿಸಿದಾಗ ಅಪಾರ ಪ್ರಮಾಣದಲ್ಲಿ ಗೋಮಾಸ ಇರುವುದು ಕಂಡುಬಂದಿದೆ. ಆಗ ರೊಚ್ಚಿಗೆದ್ದ ಸಾರ್ವಜನಿಕರು ಲಾರಿಗೆ ಬೆಂಕಿ ಹಚ್ಚಿದ್ದಾರೆ.
ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಲಾರಿ ಬೆಂಕಿಗಾಹುತಿಯಾಗಿತ್ತು.
ಲಾರಿಯಲ್ಲಿ ಸುಮಾರು ಐದು ಟನ್ ಗೂ ಹೆಚ್ಚು ಗೋಮಾಂಸ ಇತ್ತು ಎನ್ನಲಾಗುತ್ತಿದೆ. ಕಾಗವಾಡ ಪೊಲೀಸ್ ಪಿಎಸ್ ಐ ರಾಘವೇಂದ್ರ ಖೋತ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಗಾರ ಸಕ್ಕರೆ ಕಾರ್ಖಾನೆ ಹಾಗೂ ಅಥಣಿ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು.
ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿಗೆ ಐನಾಪೂರ ಗ್ರಾಮಸ್ಥರಿಂದ ಬೆಂಕಿ
