ಉ.ಕ‌ ಸುದ್ದಿಜಾಲ ಅಥಣಿ :

ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡಿದ ಕುರಿತು ಸಚಿವ ಸತೀಶ ಜಾರಕಿಹೊಳಿ ತೀವ್ರ ಟೀಕೆ ಮಾಡಿ ವ್ಯಂಗ್ಯವಾಡಿದರು “ಅಪಪ್ರಚಾರ ಮಾಡುವುದು ಬಿಜೆಪಿ ಅವರ ಕೆಲಸ. ಅವರ ಮನೆಯಲ್ಲೇ ಎರಡು–ಮೂರು ಬಾಗಿಲುಗಳು, ನಮಗೇನು ಬುದ್ಧಿ ಹೇಳೋದು?” ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸತೀಶ ಸದನದಲ್ಲಿ RSS ಶ್ಲೋಕ ಪಠಣದ ಮೂಲಕ DKC ಸುದ್ದಿಯಾಗಿರುವ ವಿಷಯಕ್ಕೂ ಸ್ಪಷ್ಟನೆ ನೀಡಿದ ಸತೀಶ ಜಾರಕಿಹೊಳಿ “ಅದು ಅವರ ವೈಯಕ್ತಿಕ ವಿಚಾರ. ಕೈಯಲ್ಲಿ ಮೈಕ್ ಇರುತ್ತದೆ, ಅವರು ಮಾತಾಡಿರ್ತಾರೆ. ಅದರ ಬಗ್ಗೆ ನನಗೇನು ಹೇಳುವ ಅವಶ್ಯಕತೆ ಇಲ್ಲ” ಎಂದರು.

ಬೆಳಗಾವಿ ಜಿಲ್ಲಾ ವಿಭಜನೆ ವಿಚಾರವಾಗಿ ಮಾತನಾಡಿದ ಅವರು,ನಾನು ವಿಭಜನೆಯ ಪರವಾಗಿಯೇ ಇದ್ದೇನೆ. ಮುಖ್ಯಮಂತ್ರಿಗಳು ಇದರ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು ಇದು ಪಕ್ಷದ ವಿಚಾರವಲ್ಲ. ವೈಯಕ್ತಿಕ ಬೆಂಬಲದ ವಿಚಾರ. ಯಾರಿಗೆ ಬೇಕಾದರೂ ಬೆಂಬಲ ಕೊಡುವ ಸ್ವಾತಂತ್ರ್ಯ ಇದೆ” ಎಂದು ಸ್ಪಷ್ಟಪಡಿಸಿದರು.