ಉ.ಕ ಸುದ್ದಿಜಾಲ ಅಥಣಿ :
ವಿಧಾನಸಭೆ ಚುನಾವಣೆಯಲ್ಲಿ ಕೈ ಮುಖಂಡ ಗಜಾನನ ಮಂಗಸೂಳಿ ನನಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ವಿಚಾರಕ್ಕೆ ಮಾತನಾಡಿದ ಮಂಗಸೂಳಿ, ಗಳ ಗಳನೆ ಅತ್ತಿದ್ದಾರೆ.
ಬೆಳಗಾಬಿ ಜಿಲ್ಲೆಯ ಅಥಣಿಯಲ್ಲಿ ಮೂಲ ಕಾಂಗ್ರೆಸ್ ಬಣದಲ್ಲಿ ಗುರುತಿಸಿಕೊಂಡಿದ್ದ ಗಜಾನನ ಮಂಗಸೂಳಿ ಅಥಣಿ ಕ್ಷೇತ್ರದಲ್ಲಿ ಪ್ರಭಾವಿ ನಾಯಕತ್ವ ಹೊಂದಿದ್ದರು. ಕಳೆದ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿತರ ಪಟ್ಟಿಯಲ್ಲಿ ಗಜಾನನ ಮಂಗಸೂಳಿ ಹೆಸರು ಮುನ್ನೆಲೆಯಲ್ಲಿತ್ತು.
ಆದರೆ ರಾಜಕೀಯ ಬದಲಾವಣೆಗಳ ನಂತರ ಕಾಂಗ್ರೆಸ್ ಪಕ್ಷದಿಂದ ಈಗಿನ ಹಾಲಿ ಶಾಸಕ ಲಕ್ಷ್ಮಣ ಸವದಿಗೆ ಕಾಂಗ್ರೆಸ್ ನಿಂದ ಟಿಕೆಟ್ ಫಿಕ್ಸ್ ಆಗಿತ್ತು.ಇದರ ಮದ್ಯ ಡಿಕೆಸಿ ಭೇಟಿಯಾಗಿತ್ತು. ಅದರಲ್ಲಿ ಸಂಧಾನ ಪ್ರಕ್ರಿಯೆ ಮುಗಿದು ಲಕ್ಷ್ಮಣ ಸವದಿಗೆ ಟಿಕೆಟ್ ನಿರ್ಣಯವಾಯಿತು.
ಇದರಲ್ಲಿ ನನಗೆ ಕ್ಯಾಬಿನೆಟ್ ದರ್ಜೆಯಲ್ಲಿ ಯಾವುದಾದರು ಉನ್ನತ ಸ್ಥಾನಮಾನಗಳನ್ನ ಕೊಡಿಸುವುದಾಗಿ ಹೇಳಿದ್ದರು. ಆದರೆ ಚುನಾವಣೆ ಬಳಿಕ ಅಥಣಿಯಲ್ಲಿ ಪಕ್ಷದಲ್ಲಿ ನನ್ನನ್ನ ಬಹಳಷ್ಟು ಕಡೆಗಣಿಸಲಾಗಿದೆ. ಇದೆ ವಿಚಾರವನ್ನ ನಾನು ಹಂಚಿಕೊಂಡಿದ್ದೆ.
ಅಥಣಿ ಶಾಸಕ ಲಕ್ಷ್ಮಣ ಸವದಿ ನಾನು ಹಣಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ನನ್ನ ಹೆಸರು ಹಾಳು ಮಾಡಲು ಹೊರಟಿದ್ದಾರೆ ಅದು ನಿಜವಾಗಿದ್ದರೆ ಅವರು ಬಂದು ಸಿದ್ದೇಶ್ವರ ದೇವಸ್ಥಾನದಲ್ಲಿ ಆನೆ ಮಾಡಿ ಹೇಳಲಿ ಎಂದು ಕಣ್ಣಲ್ಲಿ ನೀರು ಹಾಕಿ ಭಾವನಾತ್ಮಕವಾಗಿ ಹೇಳಿದರು.
VIDIO – ಸವದಿ ಮಾತಿಗೆ ಕಣ್ಣೀರು ಹಾಕಿದ ಕೈ ಮುಖಂಡ ಗಜಾನನ ಮಂಗಸೂಳಿ

