ಉ.ಕ ಸುದ್ದಿಜಾಲ ಬೆಳಗಾವಿ :
ನಾಲ್ವರು ಜಬರಿ ಕಳ್ಳರ ಬಂಧಿಸಿದ ಬೆಳಗಾವಿ ಪೊಲೀಸರು. ಜಬರದಸ್ತ ಮಾಡಿ ಜನರಿಂದ ನಗನಾಣ್ಯ ದೋಚುತ್ತಿದ್ದ ಖದೀಮರು. ಖದೀಮರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪಾರನಟ್ಟಿ ಗ್ರಾಮದವರು.
ಬಸವರಾಜ್ ಗೋದಿ,ಸಿದ್ದಪ್ಪ ಧರ್ಮಟ್ಟಿ,ಮುತ್ತೆಪ್ಪ ಪೂಜೇರಿ, ಬಸವರಾಜ್ ಪೂಜೇರಿ ಬಂಧಿತರು. ಬಂಧಿತರಿಂದ 12.5 ಗ್ರಾಂ ತೂಕದ ಚಿನ್ನಸ ಸರ,50 ಗ್ರಾಂ ತೂಕದ ಚಿನ್ನದ ಗಂಟೇನ್, ಬಂಗಾರದ ಎರಡು ಎಳೆ ಸರ,ಸೇರಿ ಒಟ್ಟು 6,70,000 ರೂಪಾಯಿ ಮೌಲ್ಯದ ಬಾಬತ್ತು ವಶಕ್ಕೆ ಪಡೆದ ಪೊಲೀಸರು.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಜಬರಿ ಕಳ್ಳತನ ಪ್ರಕರಣ. ಪ್ರಕರಣ ಬೇಧಿಸಲು ತಂಡ ರಚನೆ ಮಾಡಿದ್ದ ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ.
ತಂಡ ರಚಿಸಿ ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ನಾಲ್ವರು ಜಬರಿ ಕಳ್ಳರ ಬಂಧಿಸಿದ ಬೆಳಗಾವಿ ಪೊಲೀಸರು
