ಉ.ಕ ಸುದ್ದಿಜಾಲ ಬೆಳಗಾವಿ :

ರಭಸವಾಗಿ ಹರಿಯುವ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ! ಹಳ್ಳ ದಾಟುವಾಗ ಬೈಕ್ ‌ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಪಂಚಾಯಿತಿ ಸಿಬ್ಬಂದಿ. ಬೆಳಗಾವಿ ತಾಲೂಕಿನ ತಾರೀಹಾಳ ಗ್ರಾಮದ ಹೊರವಲಯದಲ್ಲಿ ಘಟನೆ.

ತಾರೀಹಾಳ ಗ್ರಾಮದ ಸುರೇಶ್ ನಿಜಗುಣಿ ಗುಂಡನ್ನವರ(50) ನಾಪತ್ತೆಯಾದವ. ಪಂಚಾಯತ್ ಕೆಲಸ ಮುಗಿಸಿ ರಾತ್ರಿ ಮನೆಗೆ ಹೋಗುವಾಗ ಸಂಭವಿಸಿದ ಘಟನೆ.

ಬೈಕ್ ಸಮೇತ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿಯ ಶೋಧ ಕಾರ್ಯಾಚರಣೆ. ಹಿರೇಬಾಗೆವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.