ಉ.ಕ‌ ಸುದ್ದಿಜಾಲ ಹುಕ್ಕೇರಿ :

ಆರ್‌ಎಸ್ಎಸ್ ಹಾಲಿ-ಮಾಜಿ ತಾಲೂಕು ಪ್ರಮುಖರ ಮಧ್ಯೆ ನಾನಾ… ನೀನಾ.. ಯುದ್ಧ ತಲವಾರ ಹಿಡಿದು ಬೆನ್ನು ಹತ್ತಿ ಆರ್‌ಎಸ್‌ಎಸ್ ತಾಲೂಕಾ ಪ್ರಮುಖನ ಮೇಲೆ ಅಟ್ಯಾಕ್ ಬೆಳಗಾವಿ ಜಿಲ್ಲೆಯ ಹುಕ್ಕೇರಿ ‌ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದ ಭೀಕರ ಘಟನೆ

ಹುಕ್ಕೇರಿ ತಾಲೂಕು ಆರ್‌ಎಸ್ಎಸ್ ಪ್ರಮುಖ ದತ್ತಾತ್ರೇಯ ಥೋರಾವತ್ ಮೇಲೆ ಮಾರಣಾಂತಿಕ ‌ಹಲ್ಲೆ ಹುಕ್ಕೇರಿ ತಾಲೂಕು ಮಾಜಿ ಪ್ರಮುಖ ಸಮೀರ್ ಪಾಟೀಲ ಬೆಂಬಲಿಗರಿಂದ ಹಲ್ಲೆ ಈ ಹಿಂದೆ ಹುಕ್ಕೇರಿ ತಾಲೂಕು ಪ್ರಮುಖರಾಗಿದ್ದ ಸಮೀರ್ ಪಾಟೀಲ ಆ ಹುದ್ದೆ ಈಗ ದತ್ತಾತ್ರೇಯ ಥೋರಾವತ್‌ಗೆ ಸಿಕ್ಕ ಹಿನ್ನೆಲೆಯಲ್ಲಿ ಸಮೀರ್ ಟೀಂ‌ಗೆ ಅಸಮಾಧಾನ.

ಉಭಯ ಪ್ರಮುಖರ ಬೆಂಬಲಿಗರ ಮಧ್ಯೆ ಕಳೆದೊಂದು ವರ್ಷದಿಂದ ಸೀತಲ ಸಮರ ಹೀಗಾಗಿ ದತ್ತಾತ್ರೇಯ ಕೊಲೆಗೆ ಸ್ಕೆಚ್ ಹಾಕಿದ್ದ ಸಮೀರ್ ಬೆಂಬಲಿಗ ಶ್ಯಾಮ್ ಯಾದವ್ ಮಹಾರಾಷ್ಟ್ರದ ನಾಲ್ವರನ್ನು ಕರೆಯಿಸಿ ಸಮೀರ್‌ಗೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ಸಂಚು.

ಹುಕ್ಕೇರಿ ತಾಲೂಕಿನ ಹರ್ಗಾಪುರದಲ್ಲಿರುವ ಸಮೀರ್‌ಗೆ ಸೇರಿದ ಫಾರ್ಮ್‌ಹೌಸ್ ಮತ್ತೇ ಇಚಲಕರಂಜಿಯ ಸಂಕೇತ್ ಮೇತ್ರಿ ಸಂಪರ್ಕಿಸಿರುವ ಸಮೀರ್ ಟೀಂ ಮತ್ತಿಬ್ಬರನ್ನು ಕರೆಯಿಸಿ ಮದುವೆ ಮಂಟಪದಿಂದ ಹೊರ ಬರ್ತಿದ್ದ ದತ್ತಾತ್ರೇಯ ಮೇಲೆ ಅಟ್ಯಾಕ್ ಜನರಿದ್ದ ಕಡೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡ ದತ್ತಾತ್ರೇಯ ಥೋರಾವತ.

ತಡರಾತ್ರಿ ‌ತಲವಾರನಿಂದ ಆರ್‌ಎಸ್ಎಸ್ ಪ್ರಮುಖನ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ತ್ವೇಷಮಯ ವಾತಾವರಣ ಅನ್ಯಜಾತಿಯವರೇ ಆರ್‌ಎಸ್ಎಸ್ ಪ್ರಮುಖನ ಮೇಲೆ ಅಟ್ಯಾಕ್ ಮಾಡಿದ್ದಾರೆಂಬ ವದಂತಿ ಸಂಕೇಶ್ವರ ಪಟ್ಟಣದಲ್ಲಿ ತಕ್ಷಣವೇ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಬಳಿಕ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ

ವೈಯಕ್ತಿಕ ಪ್ರತಿಷ್ಠೆಯೇ ಕೃತ್ಯಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ದೃಢ ಪ್ರಕರಣ ಸಂಬಂಧ ಸಮೀರ್ ಪಾಟೀಲ ಸೇರಿ ಏಳು ಜನರ ಬಂಧನ ಇನ್ನೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದತ್ತಾತ್ರೇಯ ಥೋರಾವತ