ಉ.ಕ ಸುದ್ದಿಜಾಲ ಮಹಾರಾಷ್ಟ್ರ :

ನೆರೆಯ ಕೊಲ್ಲಾಪುರ ಜಿಲ್ಲೆಯ ರಾಧಾನಗರಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದ ಮೂರು ಸ್ವಯಂ ಚಾಲಿತ ಗೇಟುಗಳನ್ನು ತೆರೆಯಲಾಗಿದೆ.

ಶುಕ್ರವಾರ ರಾತ್ರಿ 11:00 ಗಂಟೆಗೆ ಮೂರು ಐದು ಹಾಗೂ ಆರು ಸಂಕೆಯ ಗೇಟ್ ಓಪನ್ ಆಗಿದೆ. ಒಟ್ಟು 5,784 ಕ್ಯೂಸೆಕ ನೀರು ಭೋಗಾವತಿ ನದಿಗೆ ಬಿಡಲಾಗುತ್ತಿದೆ. ನದಿ ತೀರದ ಜನರಿಗೆ ಜಾಗೃಕರಾಗುರುವಂತೆ ಸೂಚನೆ ನೀಡಲಾಗಿದೆ.

ಹೀಗಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೃಷ್ಣ ನದಿಗೆ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹದ ಸಂಕಟ ಎದುರಾಗುವ ಸಾಧ್ಯತೆ.