ಉ.ಕ ಸುದ್ದಿಜಾಲ ರಾಯಬಾಗ :

ರಾಯಬಾಗದಿಂದ ಬಾವನಸೌಂದತ್ತಿಗೆ ತೆರಳುತ್ತಿದ್ದ ಬಸ್ ಟೇರಿಂಗ್ ಕಟ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ ಪರಿಣಾಮ 20 ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದ ಹೊರವಲದಲ್ಲಿ ಇಂದು ಸಂಜೆ ನಡೆದಿದೆ.

ರಾಯಬಾಗ ಡಿಫೋ ಬಸ್ ಇದಾಗಿದ್ದು ದಿಗ್ಗೇವಾಡಿಯಿಂದ ಬಾವನಸೌಂದತ್ತಿ ಕಡೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಸ್ಥಳೀಯರು ಪ್ರಯಾಣಿಕರನ್ನು ಬಸ್ ನಿಂದ ಹೊರತೆಗೆದಿದ್ದಾರೆ.

ಘಟನಾ ಸ್ಥಳಕ್ಕೆ ಬಸ್ ಡಿಫೋ ಮ್ಯಾನೇಜರ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಈ ಘಟನೆ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.