ಉ.ಕ ಸುದ್ದಿಜಾಲ ಕಾಗವಾಡ :
ಮಾಜಿ ಉಪಮುಖ್ಯಮಂತ್ರಿ, ಅಥಣಿಯ ಜನಪ್ರಿಯ ಶಾಸಕ ಲಕ್ಷ್ಮಣ ಸವದಿಯವರ ೬೬ ನೇ ಹುಟ್ಟು ಹಬ್ಬದ ನಿಮಿತ್ಯ ಅಖಿಲ ಭಾರತ “ಏ”ಗ್ರೇಡ್ ಪುರುಷರ ಕಬಡ್ಡಿ ಪಂದ್ಯಾವಳಿಗಳನ್ನು ಫೇ.೧೫ ಹಾಗೂ ೧೬ ರಂದು ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಏರ್ಪಡಿಸಲಾಗಿದೆ ಎಂದು ಪಟ್ಟಣ ಪಂಚಾಯತ್ ಸದಸ್ಯ ಸಂಜಯ ಬಿರಡಿ ಹೇಳಿದರು.
ಐನಾಪೂರ ಪಟ್ಟಣದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಯುವ ನಾಯಕ ಚಿದಾನಂದ ಸವದಿ ಇವರ ಕಾಗವಾಡ ಮತಕ್ಷೇತ್ರದ ಅಭಿಮಾನಿಗಳ ಬಳಗದ ವತಿಯಿಂದ ಅಖಿಲ ಭಾರತ ಏ ಗ್ರೇಡ್ ಪುರುಷರ ಕಬ್ಬಡ್ಡಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಆಂದ್ರಪ್ರದೇಶ, ತಮಿಳನಾಡು, ಹಿಮಾಚಲ ಪ್ರದೇಶ ಹರಿಯಾನಾ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಿಂದ ಪ್ರೋ ಕಬ್ಬಡಿಯ ಪ್ರಸಿದ್ದ ಆಟಗಾರರನ್ನು ಒಳಗೊಂಡಂತಹ ತಂಡಗಳು ಈ ಪಂದ್ಯಾವಳಿಗಳ ಆಕರ್ಷಣಿಯವಾಗಿವೆ ಎಂದು ಸಂಜಯ ಬಿರಡಿ ಹೇಳಿದರು.
ಫ್ರೆಬ್ರುವರಿ ೧೫ ರಂದು ಸಾಯಂಕಾಲ ೫ ಗಂಟೆಗೆ ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷö್ಮಣ ಸವದಿ, ಯುವ ಧುರೀಣ ಚಿದಾನಂದ ಸವದಿ ಚಾಲನೆ ನೀಡಲಿದ್ದಾರೆ ಏಂದು ಅಪ್ಪು ಪೂಜಾರಿ ತಿಳಿಸಿದರು.
ಪ್ರಥಮ ಬಹುಮಾನ ೧ ಲಕ್ಷ ರೂ ದ್ವಿಯ ಬಹುಮಾನ ೭೫ ಸಾವಿರ ರೂ, ತೃತಿಯ ಬಹುಮಾನ ೫೦ ಸಾವಿರ ರೂ, ಹಾಗೂ ಚತುರ್ಥ ಬಹುಮಾನ ೨೫ ಸಾವಿರ ರೂಗಳನ್ನು ಇಡಲಾಗಿದೆ.ದೇಶದ ನಾನಾ ರಾಜ್ಯಗಳಿಂದ ೩೫ಕ್ಕೂ ಅಧಿಕ ತಂಡಗಳು ಆಗಮಿಸಲಿದ್ದು, ಈ ತಂಡಗಳಿಗೆ ಊಟ,ವಸತಿ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ
ನಗದು ಟ್ರೋಫಿ,ಹಾಗೂ ಉತ್ತಮ ಆಡವಾಡಿದ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗುವುದು, ಅಲ್ಲದೆ ಸರ್ವೋತ್ತಮ ರೈಡರ್, ಕ್ಯಾಚರ್ ಬಹುಮಾನ ನೀಡಲಾಗುವುದು ಎಂದರು.
ಐನಾಪೂರ ಪಟ್ಟಣದಲ್ಕಿ ಅಂತರ ರಾಜ್ಯ ಮಟ್ಟದ ಆಹ್ವಾನಿತ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳು


