ಉ.ಕ ಸುದ್ದಿಜಾಲ ತುಮಕೂರು :

ಬೈಕ್ ಗೆ ಹಿಂಬದಿಯಿಂದ ಟ್ಯಾಕ್ಟರ್ ಡಿಕ್ಕಿ ತಲೆ ಮೇಲೆ ಟ್ಯಾಕ್ಟರ್ ಚಕ್ರ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು. ಹಿಂದೂಶ್ರೀ (16), ಮೃತ ದುರ್ದೈವಿ. ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ಘಟನೆ. ಬಾಗೇನಹಳ್ಳಿ ಗ್ರಾಮದ ಹಿಂದೂಶ್ರೀ ಸಾವು.

ಕುಣಿಗಲ್ ಪಟ್ಟಣದ ಸೆಲ್ಲಾಮೇರಿಸ್ ಶಾಲೆಯಲ್ಲಿ ಎಸ್ಎಸ್ಎಲ್ ಸಿ ಓದುತ್ತಿದ್ದ ಹಿಂದೂಶ್ರೀ. ನಿನ್ನೆ ಅವರ ಶಾಲೆಯಲ್ಲಿ ಬಿಳ್ಕೊಡಿಗೆ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ ಬೈಕ್ ನಲ್ಲಿ ತೆರಳುವಾಗ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಟ್ಯಾಕ್ಟರ್.

ತಲೆ ಮೇಲೆ‌ ಟ್ಯಾಕ್ಟರ್ ಚಕ್ರ ಹರಿದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು. ಮೃತ ವಿದ್ಯಾರ್ಥಿನಿ ಹಿಂದೂಶ್ರೀ ಕುಟುಂಬಸ್ಥರಲ್ಲಿ ಮುಗಿಲು ಮುಟ್ಟಿದ ಆಕ್ರಂಧನ.‌ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ, ಪರಿಶೀಲನೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.