ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಬೆಳಕಿಗೆ ಬಂತು ಹೈಟೇಕ್ ವಾಮಾಚಾರ – ಮೊಬೈಲ್ ಮೂಲಕ ವಾಮಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸಾಧಾರಣವಾಗಿ ಲಿಂಬೆಹಣ್ಣು, ಕುಂಕುಮ ಅರಿಶಿಣ ಇಟ್ಟು ವಾಮಾಚಾರ ಮಾಡೋದು ಕಾಮನ್. ಆದರೆ ವಾಮಾಚಾರ ಮಾಡಲೆಂದೇ ಮೊಬೈಲೇ ಇಟ್ಟ ಭೂಪರು! ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದ ಹೊರವಲಯದಲ್ಲಿ ಘಟನೆ.

ಯಳ್ಳೂರು ಗ್ರಾಮದ‌ ಕೃಷಿ ಭೂಮಿಯಲ್ಲಿ ವಾಮಾಚಾರ. ಪಾಟೀಲ್ ಎಂಬುವವರ ಗದ್ದೆಯಲ್ಲಿ ಮೊಬೈಲ್ ವಾಮಾಚಾರ ಬೆಳಕಿಗೆ. ಕಳೆದ ವಾರ ಮೂಸಂಬಿ ಇಟ್ಟು ವಾಮಾಚಾರ ಮಾಡಿದ್ದ ದುಷ್ಕರ್ಮಿಗಳು.‌ ಮೊಬೈಲ್ ಸ್ವಿಚ್ ಆಫ್ ಮಾಡಿ ಇಟ್ಟು ಹೋದ ಕಿಡಿಗೇಡಿಗಳು.

ಹೊಸ ಒಪ್ಪೊ ಕಂಪನಿಯ ಮೊಬೈಲ್ ಇಟ್ಟು ವಾಮಾಚಾರ. ಮೊಬೈಲ್ ಜೊತೆಗೆ ಲಿಂಬೆಹಣ್ಣು, ತೆಂಗಿನಕಾಯಿ, ಎಲೆ ಅಡಿಕೆ, ಕ್ಯಾರ್ ಹಾಕಿ ಇಟ್ಟ ಕಿಡಿಗೇಡಿಗಳು. ಒಂದು ಗಂಟು ಗಿಡಕ್ಕೆ ಕಟ್ಟಿ ಹೋಗಿರುವ ಕಿಡಿಗೇಡಿಗಳು. ರೈತರ ಗದ್ದೆಯಲ್ಲಿ ವಾಮಾಚಾರ ಮಾಡಿದ್ದರಿಂದ ರೈತರಲ್ಲಿ ಆತಂಕ.

ಮೊಬೈಲನ್ನೆ ವಾಮಾಚಾರಕ್ಕೆ ಬಳಸಿದ್ದು ಎಲ್ಲರಲ್ಲೂ ಅಚ್ಚರಿ. ಅಂಧ ಶ್ರದ್ಧೆಗೆ ಮೂಕ ವಿಸ್ಮಿತರಾದ ರೈತರು. ವಾಮಾಚಾರ ಮಾಡಿದ್ದನ್ನು ಬಿಚ್ಚಿಟ್ಟ ರೈತ ಮುಖಂಡ ರಾಜು ಮರವೆ.