ಉ.ಕ ಸುದ್ದಿಜಾಲ ಅಥಣಿ :
ಇದು ಯಮಲೋಕದ ದ್ವಾರ ಬಾಗಿಲು ಅಂದ್ರು ತಪ್ಪಾಗಲಾರದು. ಜನ ಅನಿವಾರ್ಯವಾಗಿ ಈ ರಸ್ತೆ ದಾಟಲು ಹೋದರೆ ಸ್ವಲ್ಪ ಯಾಮಾರಿದ್ರು ನಿಮ್ಮ ಪ್ರಾಣಕ್ಕೆ ಕುತ್ತು ಗ್ಯಾರಂಟಿ.
ಬೆಳಗಾವಿ ಜಿಲ್ಲೆ ಅಥಣಿ- ಜಮಖಂಡಿ ರಾಜ್ಯ ಹೆದ್ದಾರಿ ಮಾರ್ಗ ಮದ್ಯದಲ್ಲಿರುವ ಹಿಪ್ಪರಗಿ ಆಣೆಕಟ್ಟು ಸಂಪರ್ಕ ರಸ್ತೆಗೆ ತಡೆ ಗೋಡೆ ಇಲ್ಲದ ಪರಿಣಾಮ ಸಾಲು ಸಾಲು ಅಪಘಾತಗಳು ನಡೆಯುತ್ತಿವೆ.
ಕಳೆದ ಒಂದು ತಿಂಗಳಲ್ಲಿ 14 ಅಪಘಾತ ಪ್ರಖರಣಗಳು ಬೆಳಕಿಗೆ ಬಂದಿವೆ. ಸುಮಾರು 70-80 ಅಡಿ ಆಳವಿರುವ ಕಂದಕದಲ್ಲಿ ಮೊನ್ನೆ ಅಷ್ಟೇ ಹಾಲು ತುಂಬಿದ ಟ್ಯಾಂಕರ್ ಪಲ್ಟಿಯಾಗಿತ್ತು ಮತ್ತೆ ಇಂದು ಮದ್ಯಾನ ಆಟೋ ರಿಕ್ಷಾ ಒಂದು ಆಯತಪ್ಪಿ ಕಂದಕಕ್ಕೆ ಉರುಳಿದ್ದು ರಿಕ್ಷಾ ಮೇಲೇತ್ತಲು ಸ್ಥಳೀಯರು ಹರಸಾಹಸ ಪಡುವಂತಾಗಿದೆ.
ಅಥಣಿಯಿಂದ ಜಮಖಂಡಿ ಮಾರ್ಗವಾಗಿ ಸಾಗುತ್ತಿದ್ದ ರಿಕ್ಷಾ ವಾಹನ ಎದುರುಗಡೆ ಬರುವ ವಾಹನಕ್ಕೆ ದಾರಿ ಬಿಡುವಸ್ಟರಲ್ಲಿ ಕೆಳಗೆ ಬಿದ್ದಿದೆ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಆದಷ್ಟು ಬೇಗ ರಸ್ತೆಗೆ ತಡೆ ಗೋಡೆ ನಿರ್ಮಾಣ ಮಾಡಿ ಅಪಘಾತ ತಡೆಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಆಯತಪ್ಪಿ ಕಂದಕಕ್ಕೆ ಉರುಳಿದ ಆಟೋ ರಿಕ್ಷಾ ಚಾಲಕ ಜಸ್ಟ್ ಮಿಸ್
