ಉ.ಕ ಸುದ್ದಿಜಾಲ ರಾಯಬಾಗ :

ಉತ್ತರ ಕರ್ನಾಟಕದ ಜಾತ್ರೆ ಉತ್ಸವಗಳೇ ಹಾಗೆ ಒಂದಕ್ಕಿತ ಒಂದು ಭಿನ್ನ ವಿಭಿನ್ನ ದೈವ ದೇವರು ಭಕ್ತಿ ಎಂದರೆ ಇಲ್ಲಿನ ಜನ ಮನ:ಪೂರ್ವಕಾಗಿ ನಡೆದುಕೊಳ್ಳುತ್ತಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ನಡೆದ ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ ಭಕ್ತರು ಭಂಡಾರದಲ್ಲಿ ಮಿಂದೆದ್ದು ಊರಿನ ಆರಾಧ್ಯ ದೈವ ಅರಣ್ಯ ಸಿದ್ದೇಶ್ವರನ ಕೃಪೆಗೆ ಪಾತ್ರರಾಗಿದ್ದಾರೆ.

ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ ಬಿಸಿ ಬಿಸಿ ಹುಗ್ಗಿಯಲ್ಲಿ ಕೈಹಾಕಿ ದೇವರ ದೇವ ಋಷಿ ಕೈ ಹಾಕಿ ಹುಗ್ಗಿಯನ್ನು ದೇವರಿಗೆ ನೈವೇಧ್ಯ ನೀಡಿದಾಗಲೇ ಊರಿನ ಜನರಿಗೆ ಪ್ರಸಾದ. ದೇವ ಋಷಿ ಸುಡುವ ಹುಗ್ಗಿಯಲ್ಲಿ ಕೈ ಹಾಕಿ ಹುಗ್ಗಿಯನ್ನು ತೆಗೆಯುವ ದೃಶ್ಯ ಕಣ್ತುಂಬಿಕೊಳ್ಳಲು ಸುತ್ತ ಮುತ್ತ ಊರಿನ ಜನಸ್ಥೋಮವೇ ಸೇರಿರುತ್ತೆ.

ಅಲ್ಲದೆ ಜಾತ್ರೆಯಲ್ಲಿ ನಿರಂತರ ಐದು ದಿನಗಳ ಕಾಲ ಉಪವಾಸವಿದ್ದು ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ ನಡೆಯುವ ವೇಳೆ ಐದು ಕಬ್ಬಿಣದ ಗುಂಡುಗಳಿಂದ ದೇವ ಋಷಿ ತನ್ನ ಬೆನ್ನಿಗೆ ಹೊಡೆದುಕೊಳ್ಳುವುದು ನೋಡಲೂ ಸಹ ಅಪಾರ ಪ್ರಮಾಣದಲ್ಲಿ ಸೇರಿಕೊಂಡಿರುತ್ತದೆ.

ಇಡೀ ಗ್ರಾಮದ ಐದು ದಿನ ತಮ್ಮ ಮನೆಯಲ್ಲಿ ಅಡುಗೆ ಮಾಡದೆ ಅರಣ್ಯ ಸಿದ್ದೇಶ್ವರ ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನೆ ಸೇವಿಸಿಕೊಂಡು ಇರುತ್ತಾರೆ ಎನ್ನುವುದು ಮತ್ತೊಂದು ವಿಶೇಷ, ಡೊಳ್ಳು ಬಾರಿಸುತ್ತ ಇಡೀ ಊರು ಸುತ್ತುವರೆಯುವ ಅರಣ್ಯ ಸಿದ್ದೇಶ್ವರ ಜಾತ್ರೆ ಈ ವರ್ಷ ಸಂಪನ್ನವಾಗಿದೆ.