ಉ.ಕ ಸುದ್ದಿಜಾಲ ಬೀದರ :

ಬೀದರ್‌ನ ಡಿಪೋ ನಂಬರ್-1ರಲ್ಲಿ ಬಸ್ ಚಾಲಕ ಆತ್ಮಹತ್ಯೆ. ಬಸ್‌ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ. ರಾಜ್‌ಕುಮಾರ್ (59) ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ.

ಬೀದರ್ ತಾಲೂಕಿನ ಅಣದೂರು ಗ್ರಾಮದ ನಿವಾಸಿ ರಾಜ್‌ಕುಮಾರ್. ಬೀದರ್ ಟು ಬಳ್ಳಾರಿ ಸ್ಲಿಪರ್ ಕೋಚ್ ಡ್ರೈವರ್ ಆಗಿದ್ದ ಮೃತ ರಾಜ್‌ಕುಮಾರ್.ಬ5 ತಿಂಗಳಲ್ಲಿ ನಿವೃತ್ತಿ ಆಗಬೇಕಾಗಿದ್ದ ರಾಜ್‌ಕುಮಾರ್ ಆತ್ಮಹತ್ಯೆಗೆ ಶರಣು.ಬರಾತ್ರಿ 8 ಗಂಟೆಗೆ ಬೀದರ್‌ನಿಂದ ಬಳ್ಳಾರಿಗೆ ಹೋಗಬೇಕಿದ್ದ ರಾಜ್‌ಕುಮಾರ್.

ಚಾಲಕನ ಆತ್ಮಹತ್ಯೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ರಾಜ್‌ಕುಮಾರ್ ಫೋನ್ ಸ್ವಿಚ್ಡ್‌ಆಪ್ ಹಿನ್ನೆಲೆ ಬೇರೆ ಚಾಲಕನ ಮೂಲಕ ಬಳ್ಳಾರಿಗೆ ಕಳುಹಿಸಿದ ಡಿಪೋ ಅಧಿಕಾರಿಗಳು.

ಬಸ್ ಸ್ವಚ್ಛಗೊಳಿಸಲು ಹೋದಾಗ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ.ಬಬೀದರ್‌ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.