ಉ.ಕ ಸುದ್ದಿಜಾಲ ಹುಕ್ಕೇರಿ :
ಕೆಲಸ ಮುಗಿಸಿ ಬಸ್ ಇಳಿದು ಮನೆಗೆ ಹೋಗ್ತಿದ್ದಾಗಲೇ ಆತನ ಬರ್ಬರ ಹತ್ಯೆಯಾಗಿದೆ. ಅಷ್ಟಕ್ಕೂ ಸಣ್ಣ ವಯಸ್ಸಿನಲ್ಲೇ ಯುಕನ ಬರ್ಬರ ಹತ್ಯೆ ಮಾಡಿದ್ದು ಯಾರು? ಯಾವ ಕಾರಣಕ್ಕೆ ಕೊಲೆಯಾಗಿದೆ? ಎಂದು ವರ್ಷದ ಹಿಂದಿನ ದ್ವೇಷದ ಕಥೆ ಇದಕ್ಕೆ ಉತ್ತರ ನೀಡಿದೆ.
ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ. ನಿನ್ನೆ ರಾತ್ರಿ ಈ ಗ್ರಾಮದಲ್ಲಿ 24 ವರ್ಷದ ಮಹಾಂತೇಶ್ ಬುಕನಟ್ಟಿ ಯುವಕನನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ಲೈಬ್ರರಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡ್ತಿದ್ದ ಮಹಾಂತೇಶ್ ಎಂದನಿಂತೆ ಬಸ್ ಇಳಿದು ಮನೆ ಕಡೆಗೆ ಸಾಗ್ತಿದ್ದವನ ಮೇಲೆ ಗಿಡಗಂಟೆಯಲ್ಲಿ ಅಡಗಿ ಕುಳಿತಿದ್ದ ಗ್ಯಾಂಗ್ ಏಕಾಏಕಿ ಅಟ್ಯಾಕ್ ಮಾಡಿ ಎಲ್ಲೆಂದರಲ್ಲಿ ಹೊಡೆದು ಹತ್ಯೆ ಮಾಡಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿ ಮಗನ ಸ್ಥಿತಿ ಕಂಡು ಗೋಳಾಡಿದ್ರೂ. ಇತ್ತ ಯಮಕನಮರಡಿ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಬಳಿಕ ಶವವನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಶಿಪ್ಟ್ ಮಾಡಿದ್ದರು.
ಇತ್ತ ಕೊಲೆ ಕೇಸ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದು ತಂಡ ರಚನೆ ಮಾಡಿಕೊಂಡು ಆರೋಪಿಗಳ ಪತ್ತೆ ಶೋಧ ಕೂಡ ಶುರು ಮಾಡಿದ್ದಾರೆ. ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು ಆಕ್ರೋಶದ ನಡುವೆ ಮಹಾಂತೇಶ್ ಅಂತ್ಯಸಂಸ್ಕಾರ ಮಾಡಲಾಗಿದೆ…
ಅಷ್ಟಕ್ಕೂ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ ಪೊಲೀಸರಿಗೆ ಗೊತ್ತಾಗಿದ್ದು ಕೊಲೆಗೆ ಕಾರಣ ಅನೈತಿಕ ಸಂಬಂಧ ಅನ್ನೋ ವಿಚಾರ. ಇಲ್ಲಿ ಕೊಲೆ ಮಾಡಿದ್ದು ಬೇರೆ ಯಾರು ಅಲ್ಲಾ ಮಹಾಂತೇಶ್ ನ ಸಂಬಂಧಿಯಾಗಿರುವ ಬಸವರಾಜ್ ಬುಕನಟ್ಟಿ ಎಂಬಾತನೇ.
ಆರೋಪಿ ಬಸವರಾಜ್ ಪತ್ನಿ ಜೊತೆಗೆ ಮಹಾಂತೇಶ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನಂತೆ ಈ ವಿಚಾರ ಒಂದು ವರ್ಷದ ಹಿಂದೆ ಮಹಾಂತೇಶ್ ಆರೋಪಿ ಬಸವರಾಜ್ ಗೆ ಗೊತ್ತಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಈ ವೇಳೆ ಗ್ರಾಮದ ಹಿರಿಯರು ಸೇರಿಕೊಂಡು ಕೇಸ್ ಮಾಡೋದೆಲ್ಲಾ ಬೇಡಾ ಅಂತಾ ಹೇಳಿ ಮಹಾಂತೇಶ್ ನನ್ನ ಕರೆಯಿಸಿ ಬುದ್ದಿವಾದ ಹೇಳಿ ಆಕೆಯ ತಂಟೆಗೆ ಹೋಗುವುದಿಲ್ಲ ಅಂತಾ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಅಲ್ಲೇ ರಾಜಿ ಸಂಧಾನ ಮಾಡಿದ್ದರು.
ಆ ದಿನದಿಂದಲೂ ಕೂಡ ಮಹಾಂತೇಶ್ ಮೇಲೆ ಒಂದು ಕಣ್ಣಿಟ್ಟಿದ್ದ ಆರೋಪಿ ಬಸವರಾಜ್ ನಿನ್ನೆ ದಿನ ಸಂಜೆ ಆತ ಮನೆಗೆ ವಾಪಾಸ್ ಆಗೋದನ್ನ ಕಾದುಕುಳಿತಿದ್ದ. ಸ್ನೇಹಿತನೊಬ್ಬನನ್ನ ಆತ ಬಸ್ ಇಳಿದು ಹೋಗುವುದನ್ನ ವಾಚ್ ಮಾಡಲು ಇಟ್ಟಿದ್ರೇ ಇನ್ನೊಂದು ಕಡೆ ತಾನೂ ಇಬ್ಬರನ್ನ ಕರೆದುಕೊಂಡು ಮಹಾಂತೇಶ್ ನಡೆದುಕೊಂಡು ಹೋಗುವ ಮಾರ್ಗದಲ್ಲಿ ಗಿಡಗಂಟೆಗಳ ಮಧ್ಯೆ ಅಡಗಿ ಕುಳಿತಿದ್ದ.
ಈತ ಬರ್ತಿದ್ದಂತೆ ಕಾಲಿಗೆ ಮಚ್ಚಿನಿಂದ ಹೊಡೆದು ಬಳಿಕ ಎದೆ ಮೇಲೆ ಹಾಗೂ ಕುತ್ತಿಗೆ ಭಾಗಕ್ಕೆ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸದ್ಯ ಪ್ರಕರಣದ ಆರೋಪಿ ಯಾರು ಅಂತಾ ಗೊತಾಗಿದ್ದು ಆತನ ಲೋಕೆಷನ್ ಆಧಾರದ ಮೇಲೆ ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಮನೆ ಜವಾಬ್ದಾರಿ ಹೊತ್ತು ಕುಟುಂಬ ನಿರ್ವಹಣೆ ಮಾಡುತ್ತಿದ್ದ ಮಗನ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.
ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ನಡೆದ ಕೊಲೆಗೆ ಅನೈತಿಕ ಸಂಬಧವೆ ಕಾರಣ ಇಲ್ಲಿದೆ ಸಂಪೂರ್ಣ ಮಾಹಿತಿ
