ಉ‌.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಕಲ್ಲು ತೂರಾಟ ಪ್ರಕರಣ – ಘಟನೆ ಸಂಬಂಧಿಸಿದಂತೆ 11ಜನರನ್ನ ವಶಕ್ಕೆ ಪಡೆದು ವಿಚಾರಣೆ. ಅನುಮತಿ ಇಲ್ಲದೇ ಮಾರ್ಗದ ಬದಲಾವಣೆ, ಕಲ್ಲು ತೂರಾಟ ಆರೋಪದಡಿ ವಶಕ್ಕೆ. ಖಡೇಬಜಾರ್ ಪೊಲೀಸರಿಂದ ವಶಕ್ಕೆ ಪಡೆದು ವಿಚಾರಣೆ. ಖಡೇಬಜಾರ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಉರುಸ್ ಮೆರವಣಿಗೆ ಐ‌ ಲವ್ ಮಹಮ್ಮದ್ ಘೋಷಣೆ ಕೂಗಿದ್ದ ಮುಸ್ಲಿಂ ಸಮುದಾಯದ ಯುವಕರು. ಯುವಕರು ಕೂಗಿದ ಘೋಷಣೆ ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ. ಸದ್ಯ ಪರಿಸ್ಥಿತಿ ಹತ್ತೋಟಿಗೆ ತೆಗೆದುಕೊಂಡ ಪೊಲೀಸರು. ರಾತ್ರಿಯಿಡೀ ಗಸ್ತು ಕಾಯ್ದಿರುವ ಪೊಲೀಸರು. ಸಿಎಂ ಸಿದ್ದರಾಮಯ್ಯ ಹಿನ್ನೆಲೆ ಹೆಚ್ಚಿನ ನಿಗಾ ವಹಿಸಿದ ಪೊಲೀಸರು. ಖಡೇಬಜಾರ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು

ಖಡಕ್ ಗಲ್ಲಿ ಕಲ್ಲು ತೂರಾಟ ಪ್ರಕರಣ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಭೇಟಿ. ಘಟನೆ ಬಗ್ಗೆ ತಾವೇ ಖುದ್ದು ಪರಿಶೀಲನೆ ನಡೆಸಿ. ಸ್ಥಳೀಯರು, ಪೊಲೀಸರಿಂದ ಮಾಹಿತಿ ಪಡೆದ ಕಮಿಷನರ್‌. ಬಳಿಕ ಮಾಧ್ಯಮಗಳಿಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿಕೆ.

ಖಡಕ್ ಗಲ್ಲಿಯಲ್ಲಿ ಎರಡು ಕೋಮಿನ ಜನರ ನಡುವೆ ಘರ್ಷಣೆ ನಡೆದಿದೆ. ಒಂದು ಧಾರ್ಮಿಕ ಕಾರ್ಯಕ್ರಮ ಇತ್ತು‌. ಒಂದು ರೂಟ್ ಫಿಕ್ಸ್ ಇದೆ ಅದನ್ನ ಬಿಟ್ಟು ಬೇರೆ ರೂಟ್ ನಲ್ಲಿ ಬಂದಿದ್ದಾರೆ. ಇದನ್ನ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ ಈ ವೇಳೆ ಘರ್ಷಣೆ ಆಗಿದೆ.

ಸ್ಥಳೀಯರು ಕಲ್ಲು ತೂರಾಟ ಆಗಿದೆ ಅಂತಾ ಕೇಸ್ ಕೊಟ್ಟಿದ್ದಾರೆ. ಯಾರು ತಪ್ಪು ಮಾಡಿದಾರೆ ಅವರ ಮೇಲೆ ಕ್ರಮ ಆಗುತ್ತೆ. ಯಾರಿಗೂ ಗಾಯ ಆಗಿಲ್ಲ, ಎರಡು ಕೋಮಿನ ಹಿರಿಯರು ಕೂಡಲೇ ಸರಿ ಪಡೆಸಿದ್ದಾರೆ.

ಓರಿಜನಲ್ ರೂಟ್ ಬಿಟ್ಟು ಬಂದು ತಪ್ಪಾಗಿದೆ.‌ಐ ಎಲ್ ಬ್ಯಾನರ್ ಹಾಕಿದ ಪ್ರಕರಣ‌. ಮಹಾನಗರ ಪಾಲಿಕೆ ಅವರಿಗೆ ಹೇಳುತ್ತೇವೆ. ಅನುಮತಿ ಪಡೆದು ಬ್ಯಾನರ್ ಹಾಕಲು ಸೂಚನೆ ನೀಡ್ತೇವೆ ಎಂದರು.

.