ಉ.ಕ‌ ಸುದ್ದಿಜಾಲ ಹುಬ್ಬಳ್ಳಿ :

ಹುಬ್ಬಳ್ಳಿಯಲ್ಲಿ ಶಾಸಕ ಹಾಗೂ NWKRTC ಅಧ್ಯಕ್ಷ ರಾಜು ಕಾಗೆ ಹೇಳಿಕೆ ಸಂಸ್ಥೆಗೆ ಹೊಸ ಏಳು ನೂರು ಬಸ್ ಖರೀದಿ ಮಾಡುತ್ತಿದ್ದೇವೆ ಮೊದಲ ಹಂತದಲ್ಲಿ ಮೂರು ನೂರು ಬಸ್ ಖರೀದಿ ಮಾಡುತ್ತಿದ್ದೇವ ಶಕ್ತಿ ಯೋಜನೆಯಿಂದ ನಿಗಮಕ್ಕೆ ಲಾಭವಾಗ್ತಿದೆ.

ಹೀಗಾಗಿ ಪ್ರತಿ ತಿಂಗಳು 5 ನೇ ತಾರೀಖಿನೊಳಗೆ ಸಿಬ್ಬಂದಿಗೆ ವೇತನ ನೀಡುತ್ತಿದ್ದೇವೆ. ಶಕ್ತಿ ಯೋಜನೆಯ 860 ಕೋಟಿ ಹಣ ಸರ್ಕಾರದಿಂದ ಬಾಕಿ ಬರಬೇಕಿದೆ. ಸರ್ಕಾರದಿಂದ ಬಾಕಿ ಬಂದ್ರೆ ನಿಗಮಕ್ಕೆ ಇನ್ನು ಹೆಚ್ಚು ಅನಕೂಲವಾಗುತ್ತದೆ‌. ನಿಗಮದಲ್ಲಿ ತೊಂದರೆಗಳು ಸಾವಿರಾರು ಇವೆ, ಅವುಗಳನ್ನು ಬಗೆಹರಿಸುತ್ತಿದ್ದೇವೆ. ಪ್ರತಿ ತಿಂಗಳು ಶೇಕಡಾ 80 ರಷ್ಟು ಶಕ್ತಿ ಯೋಜನೆ ಹಣ ಮರುಪಾವತಿಯಾಗುತ್ತಿದೆ.

ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ವಿಚಾರ ಸಿಎಂ ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕ ಕ್ಕೆ ಸರ್ಕಾರ 5 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಅದೇ ರೀತಿ ಕಿತ್ತೂರು ಕರ್ನಾಟಕಕ್ಕೂ ಅನುಧಾನ ನೀಡುವಂತೆ ಕೇಳುತ್ತಿದ್ದೇವೆ. ಈ ಭಾಗದಲ್ಲಿ ಕೂಡಾ ಹಿಂದುಳಿದ ತಾಲೂಕುಗಳಿವೆ ಹೀಗಾಗಿ ನಮಗೂ ಅನುದಾನ ನೀಡಿ ಅಂತ ಕೇಳುತ್ತಿದ್ದೇವೆ ಎಂದರು.