ಉ.ಕ ಸುದ್ದಿಜಾಲ ಬೆಳಗಾವಿ :

ಹೆಂಡತಿಯನ್ನು ಕೊಂದು ಬೆಡ್ ಕೆಳಗೆ ಹೆಣ ಅಡಗಿಸಿಟ್ಟ ಪಾಪಿ ಪತಿ. ಕಳೆದ ಮೂರು ದಿನಗಳ ಹಿಂದೆ ಕೊಲೆ ಮಾಡಿ ಪತಿ ಪರಾರಿ. ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ಗಂಡ ಪರಾರಿ. ಊರಿಗೆ ಹೋಗಿದ್ದ ಅತ್ತೆ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿಯಲ್ಲಿ ನಡೆದ ಘಟನೆ. ಸಾಕ್ಷಿ ಆಕಾಶ್ ಕಂಬಾರ (20) ಕೊಲೆಯಾದ ದುರ್ದೈವಿ. ಕಳೆದ ನಾಲ್ಕು ತಿಂಗಳ ಹಿಂದೆಯೇ ಮದುವೆ ಆಗಿತ್ತು. ಆಕಾಶ್ ಕಂಬಾರ್ ಕೊಲೆ ಮಾಡಿ ಪರಾರಿಯಾಗಿರುವ ಪಾಪಿ ಪತಿ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡಲಗಿ ಪೊಲೀಸರ ಹಾಗೂ ಗೋಕಾಕ ಡಿವೈಎಸ್ಪಿ ಭೇಟಿ ಪರಿಶೀಲನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಭೇಟಿ,

ತಹಶೀಲ್ದಾರ್ ಮುಂದೆ ವರದಕ್ಷಿಣೆ ಆರೋಪ ಮಾಡಿದ ಮೃತ ಸಾಕ್ಷಿ ಕುಟುಂಬಸ್ಥರು. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.