ಉ.ಕ ಸುದ್ದಿಜಾಲ ರಾಯಬಾಗ :

19 ವರ್ಷದ ಹುಡುಗಿ, 29 ವರ್ಷದ ಹುಡುಗ ಪರಸ್ಪರ ಪ್ರೀತಿಸಿ ಮನೆಯಿಂದ ಪರಾರಿ. ಪ್ರೀತಿಸಿದ ಹುಡುಗನೊಂದಿಗೆ ಮನೆಬಿಟ್ಟು ಪರಾರಿಯಾದ ಹುಡುಗಿ. ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು ತಿಥಿ ಮಾಡಿ ಊರಿಗೆ ಊಟ ಹಾಕಿಸಿದ ನೊಂದ ತಂದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ ಕರುಳ ಬಳ್ಳಿ ಸಂಬಂಧ ಕತ್ತರಿಸಿಕೊಂಡ ತಂದೆ. ಸುಶ್ಮಿತಾ ಶಿವಗೌಡ ಪಾಟೀಲ ಎಂಬಾಕೆ ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾಗಿದ್ದಳು.

ಅದೇ ಗ್ರಾಮದ ವಿಠ್ಠಲ ಬಸ್ತವಾಡೆ ಎಂಬ ಯುವಕನೊಂದಿಗೆ ಪರಾರಿಯಾಗಿದ್ದ ಸುಶ್ಮಿತಾ. ವಿಠ್ಠಲ ಬಸ್ತವಾಡ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಸುಶ್ಮಿತಾ ತಂದೆಗೆ ನಾಲ್ಕು ಜನ ಹೆಣ್ಣುಮಕ್ಕಳು, ಇವಳು ಕೊನೆಯವಳಾಗಿದ್ದಳು.

ಮನೆತನದ ಸಂಸ್ಕಾರ ಮುರಿದು ಮಗಳು ಓಡಿಹೋಗಿದ್ದರಿಂದ ಮನನೊಂದಿರೋ ಶಿವಗೌಡ ಪಾಟೀಲ. ಮೊದಲಿಗೆ ರಾಯಬಾಗ ಪೊಲೀಸ್ ಸ್ಟೇಷನ್‌ನಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದ ಶಿವಗೌಡ. .

ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭರ್ಜರಿ ಭೋಜನ ಹಾಕಿಸಿದ ನೊಂದ ತಂದೆ ಶಿವಗೌಡ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.