ಉ.ಕ ಸುದ್ದಿಜಾಲ ಕಾಗವಾಡ :

ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಶ್ರೀಮಂತ ಪಾಟೀಲ್ ಪುತ್ರ ಶ್ರೀನಿವಾಸ ಪಾಟೀಲ್ ನಾಮ ನಿರ್ದೇಶನ ಮಾಡಿದ್ದರು. ಅದರಂತೆ ಶಾಸಕ ರಾಜು ಕಾಗೆ ನಾಮೀನೇಶನ್ ಮಾಡಿದ್ದರು. ಆದರೆ ಇಂದು ಶ್ರೀನಿವಾಸ್ ಪಾಟೀಲ ನಾಮಪತ್ರ ಹಿಂದಕ್ಕೆ ಪಡೆದಿದ್ದು. ರಾಜು ಕಾಗೆ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ.

ಡಿಸಿಸಿ ಬ್ಯಾಂಕ್ ಚುನಾವಣೆ ಕೊನೆಯ ಘಟ್ಟ ತಲುಪಿದ್ದು, ಲಕ್ಷ್ಮಣ ಸವದಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ ಪಾಟೀಲ ಇಂದು ಬೆಳಗಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿಯೊಂದಿಗೆ ನಾಮನಿರ್ದೇಶನ ಹಿಂದಕ್ಕೆ ಪಡೆದಿದ್ದು ಸಂಚಲನ ಮೂಡಿಸಿದೆ.

ಅತ್ತ ಹುಕ್ಕೇರಿ ಚುನಾವಣೆ ಬಳಿಕ,ಡಿಸಿಸಿ ಬ್ಯಾಂಕ್ ಗದ್ದುಗೆ ಗುದ್ದಾಟದಲ್ಲಿ ಬೆಳಗಾವಿಯ ಆರು ಕ್ಷೇತ್ರಗಳಲ್ಲಿ ಜಾರಕಿಹೊಳಿ ಬೆಂಬಲಿತರೂ ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾದರೆ. ಇಂದು ಬಾಲಚಂದ್ರ ಜಾರಕಿಹೊಳಿ ತನ್ನ ಆಪ್ತವಲಯಗಳಲ್ಲಿ ಗುರುತಿಸಿಕೊಂಡ ಶ್ರೀನಿವಾಸ ಪಾಟೀಲ ನಾಮಪತ್ರ ಹಿಂದಕ್ಕೆ ಪಡೆದಿದ್ದು ರಾಜು ಕಾಗೆ ನೇರ ಗೆಲುವಿಗೆ ಕಾರಣವಾಗಿದೆ.