ಉ.ಕ ಸುದ್ದಿಜಾಲ ಬೆಳಗಾವಿ :
ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ತೆರೆ ಬಿದ್ದಿದೆ. ಇಂದು (ಭಾನುವಾರ) ನಡೆದ ಚುನಾವಣೆಯಲ್ಲಿ ಮೂರು ತಾಲ್ಲೂಕುಗಳ ಫಲಿತಾಂಶ ಮಾತ್ರ ಅಧಿಕೃತವಾಗಿ ಪ್ರಕಟವಾಗಿದ್ದು, ಇನ್ನುಳಿದ ನಾಲ್ಕು ತಾಲ್ಲೂಕುಗಳ ಫಲಿತಾಂಶ ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 28ರಂದು ಅಧಿಕೃತವಾಗಿ ಪ್ರಕಟವಾಗಲಿದೆ.
ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಕೇಂದ್ರ ಸಹಕಾರಿ ಬ್ಯಾಂಕಿನ 7 ನಿರ್ದೇಶಕ ಸ್ಥಾನಗಳಿಗೆ ಇಂದು ತುರುಸಿನಿಂದ ಚುನಾವಣೆ ನಡೆಯಿತು. ಬೆಳಿಗ್ಗೆ 9 ಗಂಟೆಗೆ ನಗರದ ಬಿ.ಕೆ.ಮಾಡೆಲ್ ಹೈಸ್ಕೂಲ್‌ನಲ್ಲಿ ಆರಂಭವಾದ ಮತದಾನ ಸಾಯಂಕಾಲ 4 ಗಂಟೆವರೆಗೆ ನಡೆಯಿತು. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮತ ಎಣಿಕೆ ಶುರುವಾಯಿತು. ರಾಮದುರ್ಗ ತಾಲ್ಲೂಕಿನಿಂದ ಸ್ಪರ್ಧಿಸಿದ್ದ ಮಲ್ಲಣ್ಣ ಯಾದವಾಡ ಗೆಲುವು ಸಾಧಿಸಿದರು.
ರಾಮದುರ್ಗ ತಾಲೂಕಿನ ಫಲಿತಾಂಶ ಮಲಣ್ಣಾ ಯಾದವಾಡ 19
ಶ್ರೀಕಾಂತ್ ಧವನ – 16, ಮಲ್ಲಣ್ಣಾ ಯಾದವಾಡ- 3 ಮತಗಳಿಂದ ಗೆಲುವು
ಅಥಣಿ ತಾಲೂಕಿನ ಫಲಿತಾಂಶ ಲಕ್ಷ್ಮಣ ಸವದಿ- 122 ಮತಗಳು
ಮಹೇಶ್ ಕುಮಟಳ್ಳಿ -3 ಲಕ್ಷ್ಮಣ ಸವದಿ 119 ಮತಗಳಿಂದ ಗೆಲುವು
ರಾಯಬಾಗ ತಾಲೂಕಿನ ಫಲಿತಾಂಶ ಅಪ್ಪಾಸಾಹೇಬ್ ಕುಲಗುಡೆ -120 ಬಸನಗೌಡ ಆಸಂಗಿ – 64 ಅಪ್ಪಾಸಾಹೇಬ್ ಕುಲಗುಡೆ ಗೆಲುವು
ಮೂರು ಕ್ಷೇತ್ರದಲ್ಲಿ ಅಧಿಕೃತ ಗೆಲವು ಸಾಧಿಸಿದ ಅಭ್ಯರ್ಥಿಗಳು
ನಿಪ್ಪಾಣಿ ತಾಲೂಕಿನ ಫಲಿತಾಂಶ ಅಣ್ಣಾಸಾಹೇಬ್ ಜೋಲ್ಲೆ -71 ಮತಗಳು ಉತ್ತಮ ಪಾಟೀಲ್ -55 ಮತಗಳು
ಕಿತ್ತೂರು ತಾಲೂಕಿನ ಫಲಿತಾಂಶ ನಾನಾಸಾಹೇಬ್ ಪಾಟೀಲ್ 15 ಮತಗಳು ವಿಕ್ರಮ ಇನಾಮದಾರ 15 ಮತಗಳು
ಹುಕ್ಕೇರಿ ತಾಲೂಕಿನ ಫಲಿತಾಂಶ ರಮೇಶ್ ಕತ್ತಿ 59 ಮತಗಳು
ರಾಜೇಂದ್ರ ಪಾಟೀಲ್ 30 ಮತಗಳು
ಬೈಲಹೊಂಗಲ ತಾಲೂಕಿನ ಫಲಿತಾಂಶ ವಿಐ ಪಾಟೀಲ್ 20
ಮಹಾಂತೇಶ ದೊಡಗೌಡರ 53
ಇನ್ನುಳಿದಂತೆ, ಹುಕ್ಕೇರಿ ತಾಲ್ಲೂಕಿನಿಂದ ರಮೇಶ ಕತ್ತಿ, ನಿಪ್ಪಾಣಿ ಅಣ್ಣಾಸಾಹೇಬ ಜೊಲ್ಲೆ, ಕಿತ್ತೂರಿನಿಂದ ನಾನಾಸಾಹೇಬ ಪಾಟೀಲ, ಬೈಲಹೊಂಗಲ ಮಹಾಂತೇಶ ದೊಡ್ಡಗೌಡರ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಮತ ಪಡೆದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.
ಆದರೆ, ಈ ನಾಲ್ವರ ಗೆಲುವನ್ನು ಅ.28ರಂದು ನ್ಯಾಯಾಲಯದ ನಿರ್ದೇಶನದ ಬಳಿಕ ಅಧಿಕೃತವಾಗಿ ಚುನಾವಣಾಧಿಕಾರಿ ಘೋಷಣೆ ಮಾಡಲಿದ್ದಾರೆ. ಗೆದ್ದವರಿಗೆ ಚುನಾವಣಾಧಿಕಾರಿ ಶ್ರವಣ ನಾಯಿಕ ಅವರು ಪ್ರಮಾಣಪತ್ರ ವಿತರಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೋಳಿ ಬಣದ ಭರ್ಜರಿ ಗೆಲುವು ಸೋತು ತೀವ್ರ ಮುಖಭಂಗ ಅನುಭವಿಸಿದ ಕತ್ತಿ- ಸವದಿ ಬಣ ಒಟ್ಟು 16 ಸ್ಥಾನಗಳಲ್ಲಿ 11ಸ್ಥಾನ ಗೆದ್ದು ಬಿಗಿದ ಜಾರಕಿಹೋಳಿ ಮತದಾನಕ್ಕೆ ಮುನ್ನವೇ 7ಸ್ಥಾನಗಳನ್ನ ಅವಿರೋಧ ಆಯ್ಕೆ ಮಾಡಿಕೊಂಡಿದ್ದ ಜಾರಕಿಹೋಳಿ ಬಣ
ಮತದಾನ ನಡೆದ ಇಂದು ಮತ್ತೆ 4 ಸ್ಥಾನ ಗೆದ್ದು ಬಿಗಿದ ಜಾರಕಿಹೋಳಿ ಬಣ ಜಾರಕಿಹೋಳಿ ಬಣ ವರ್ಸಸ್ ಸವದಿ ಕತ್ತಿ ಬಣದ ನಡುವೆ ತೀವ್ರ ಪ್ರತಿಷ್ಠೆ ಏರ್ಪಟ್ಟಿತ್ತು ಕೇವಲ 5 ಸ್ಥಾನಗಳಲ್ಲಿ ಮಾತ್ರ ಗೆದ್ದು ಸೋಲು ಒಪ್ಪಿಕೊಂಡ ಸವದಿ- ಕತ್ತಿ ಬಣ
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಗೆದ್ದು ಬಿಗಿದವರ ಲಿಸ್ಟ್
1)ಯರಗಟ್ಟಿ ವಿಶ್ವಾಸ್ ವೈದ್ಯ.
2)ಚಿಕ್ಕೋಡಿಯಿಂದ ಗಣೇಶ ಹುಕ್ಕೇರಿ.
3)ಅಥಣಿಯಿಂದ ಲಕ್ಷ್ಮಣ ಸವದಿ.
4)ಕಾಗವಾಡದಿಂದ ರಾಜು ಕಾಗೆ.
5) ರಾಮದುರ್ಗದಿಂದ ಮಲ್ಲಣ್ಣ ಯಾದವಾಡ.
6)ಬೈಲಹೊಂಗಲದಿಂದ ಮಹಾಂತೇಶ ದೊಡಗೌಡರ.
7)ಖಾನಾಪೂರ ಅರವಿಂದ ಪಾಟೀಲ.
8)ಹುಕ್ಕೇರಿಯಿಂದ ರಮೇಶ ಕತ್ತಿ
9) ನಿಪ್ಪಾಣಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ.
10)ಕಿತ್ತೂರಿನಿಂದ ನಾನಾಸಾಹೇಬ್ ಪಾಟೀಲ.
11) ರಾಯಬಾಗದಿಂದ ಅಪ್ಪಾಸಾಹೇಬ್ ಕುಲಗೂಡೆ.
12)ಬೆಳಗಾವಿ ತಾಲೂಕಿನಿಂದ ರಾಹುಲ್ ಜಾರಕಿಹೊಳಿ.
13) ಗೋಕಾಕನಿಂದ ಅಮರನಾಥ ಜಾರಕಿಹೊಳಿ.
14)ಮೂಡಲಗಿಯಿಂದ ನೀಲಕಂಠ ಕಪ್ಪಲಗುದ್ದಿ.
15)ಸವದತ್ತಿಯಿಂದ ವಿರೂಪಾಕ್ಷ ಮಾಮನಿ.
16) ಇತರೆಯಿಂದ ಚೆನ್ನರಾಜ್ ಹಟ್ಟಿಹೊಳಿ
ಬೆಳಗಾವಿ ಡಿಸಿಸಿ ಬ್ಯಾಂಕ ಚುನಾವಣೆ ಫಲಿತಾಂಶ ಪ್ರಕಟ – ಯಾರಿಗೆ ಎಷ್ಟುಮತ ಇಲ್ಲಿದೆ ಸಂಪೂರ್ಣ ಮಾಹಿತಿ
